ಅಹ್ಮದಾಬಾದ್: ಸಯ್ಯದ್ ಮುಷ್ತಾಕ್ ಅಲಿ ಟಿ-20 ಟೂರ್ನಮೆಂಟ್ನ ಕ್ವಾರ್ಟರ್ ಫೈನಲ್ನಲ್ಲಿ ಕರ್ನಾಟಕ ತಂಡ ಪಂಜಾಬ್ ವಿರುದ್ಧ ಹೀನಾಯ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದಿದೆ.
ಅಹಮದಾಬಾದ್ನ ಸರ್ದಾರ್ ಪಟೇಲ್ ಸ್ಟೇಡಿಯಂನಲ್ಲಿ ನಡೆದ ಮೊದಲ ಕ್ವಾರ್ಟರ್ ಫೈನಲ್ನಲ್ಲಿ ಟಾಸ್ ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ ಕೇವಲ 87 ರನ್ಗಳಿಗೆ ಆಲೌಟ್ ಆಗಿತ್ತು. ಅನಿವೃದ್ಧ ಜೋಶಿ 27 ರನ್, ಪಡಿಕ್ಕಲ್ 11, ಕರುಣ್ ನಾಯರ್ 12, ಶ್ರೇಯಸ್ ಅಯ್ಯರ್ 13 ರನ್ ಗಳಿಸಿದರು.
ಪಂಜಾಬ್ ತಂಡದ ಪರ ಸಿದ್ಧಾರ್ಥ್ ಕೌಲ್ 15ಕ್ಕೆ 3, ರಾಮ್ದೀಪ್ ಸಿಂಗ್ 22ಕ್ಕೆ 2, ಅರ್ಶದೀಪ್ ಸಿಂಗ್ 16ಕ್ಕೆ 2, ಸಂದೀಪ್ ಶರ್ಮಾ 17ಕ್ಕೆ 2 ವಿಕೆಟ್ ಪಡೆದರು.
88 ರನ್ಗಳ ಸಾಧಾರಣ ಗುರಿ ಬೆನ್ನತ್ತಿದ ಪಂಜಾಬ್ ತಂಡ ಒಂದು ವಿಕೆಟ್ ಕಳೆದುಕೊಂಡು 89 ರನ್ ಗಳಿಸಿತು. ಸಿಮ್ರಾನ್ ಸಿಂಗ್ ಅಜೇಯ 49 ಮತ್ತು ಮಂದೀಪ್ ಸಿಂಗ್ ಅಜೇಯ 35 ರನ್ ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು.
ಪಂಜಾಬ್ ತಂಡ ಸೆಮಿಫೈನಲ್ ಪಂದ್ಯದಲ್ಲಿ ಕ್ವಾರ್ಟರ್ ಫೈನಲ್ 3ರಲ್ಲಿ ಗೆಲ್ಲುವ ವಿಜೇತರನ್ನು ಎದುರಿಸಲಿದೆ.