ಸಿಡ್ನಿ(ಆಸ್ಟ್ರೇಲಿಯಾ):ಸಿಡ್ನಿ ಸುತ್ತಮುತ್ತಲ ಪ್ರದೇಶದಲ್ಲಿ ಕಳೆದ ಕೆಲ ದಿನಗಳಿಂದ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು, ಎಸ್‌ಸಿಜಿಯಲ್ಲಿ ಜನವರಿ 7 ರಿಂದ ಆರಂಭವಾಗಲಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯಕ್ಕೆ ಆತಂಕ ಎದುರಾಗಿದೆ.
ಡಿಸೆಂಬರ್ 31 ರಂದು ಸಿಡ್ನಿಯ ಸುತ್ತಮುತ್ತಲ ಪ್ರದೇಶದಲ್ಲಿ ಹೊಸದಾಗಿ 10 ಪ್ರಕರಣಗಳು ಕಾಣಿಸಿಕೊಂಡಿದ್ದು, ಕಳೆದ ಎರಡು ವಾರಗಳಲ್ಲಿ 170 ಕೇಸ್ ಪತ್ತೆಯಾಗಿವೆ. ಹೀಗಾಗಿ ಕ್ರೀಡಾಂಗಣದೊಳಗೆ ಪ್ರೇಕ್ಷರಿಲ್ಲದೇ ಮೂರನೇ ಟೆಸ್ಟ್ ನಡೆಸಲಾಗುತ್ತದೆ ಎಂದು ವರದಿಗಳು ಹೇಳುತ್ತಿವೆ.
ಎಸ್‌ಸಿಜಿಯಿಂದ ಕೇವಲ 30 ಕಿಲೋಮೀಟರ್ ದೂರದಲ್ಲಿರುವ ಬೆರಾಲಾ ಮತ್ತು ಸ್ಮಿತ್‌ಫೀಲ್ಡ್ ಪ್ರದೇಶಗಳಲ್ಲಿ ಅಲರ್ಟ್ ಘೋಷಣೆ ಮಾಡಲಾಗಿದೆ. "ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲು ಕರೆಗಳು ಬಂದಿವೆ ಮತ್ತು ಸಹಜವಾಗಿ ಮೂರನೇ ಟೆಸ್ಟ್ ಪಂದ್ಯ ವೀಕ್ಷಣೆಗೆ ಮೈದಾನಕ್ಕೆ ಪ್ರೇಕ್ಷಕರ ಆಗಮನವನ್ನು ತಡೆಹಿಯಲಾಗುತ್ತದೆ ಎನ್ನಲಾಗಿದೆ. ಈ ಬಗ್ಗೆ ನ್ಯೂ ಸೌತ್ ವೇಲ್ಸ್ ಪ್ರಧಾನಮಂತ್ರಿ ಅವರ ಬಳಿ ಮಾಹಿತಿ ಪಡೆಯಲಾಗುತ್ತದೆ. 2020ರ ಕೊನೆಯ ದಿನಕ್ಕೆ 10 ಪ್ರಕರಣಗಳು ಪತ್ತೆಯಾಗಿದ್ದು, ಈ ಸಂಖ್ಯೆ ನಿಜಕ್ಕೂ ಗಮನಾರ್ಹವಾಗಿದೆ"ಎಂದು ವರದಿಯಲ್ಲಿ ಹೇಳಲಾಗಿದೆ.