ಸಿಡ್ನಿ: ಮಳೆಯಡಚಣೆಯ ನಡುವೆಯೂ ನಡೆದ 12 ಓವರ್ಗಳ ಬಿಬಿಎಲ್ ಫೈನಲ್ ಪಂದ್ಯದಲ್ಲಿ ಸಿಡ್ನಿ ಸಿಕ್ಸರ್ ತಂಡ ಮ್ಯಾಕ್ಸ್ವೆಲ್ ನೇತೃತ್ವದ ಮೆಲ್ಬೋರ್ನ್ ಸ್ಟಾರ್ಸ್ ವಿರುದ್ಧ 19 ರನ್ಗಳ ಜಯ ಸಾಧಿಸಿ ಬಿಬಿಎಲ್ನ 9ನೇ ಆವೃತ್ತಿಯ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಟೂರ್ನಿಯ ಲೀಗ್ನಲ್ಲಿ ಪ್ರಾಬಲ್ಯ ಸಾಧಿಸಿದ್ದ ಮ್ಯಾಕ್ಸ್ವೆಲ್ ಪಡೆ ಫೈನಲ್ನಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿತು. ಬ್ಯಾಟಿಂಗ್ ಬಂದ ಸಿಡ್ನಿ ಸಿಕ್ಸರ್ಸ್ 12 ಓವರ್ಗಳಿಗೆ ಸೀಮಿತವಾಗಿದ್ದ ಪಂದ್ಯದಲ್ಲಿ 5 ವಿಕೆಟ್ ಕಳೆದುಕೊಂಡು 116 ರನ್ಗಳಿಸಿತು. ಆರ್ಸಿಬಿ ತಂಡಕ್ಕೆ ಸೇರ್ಪಡೆಯಾಗಿರುವ ವಿಕೆಟ್ ಕೀಪರ್ ಜೋಸ್ ಫಿಲಿಪ್ಪೆ ಕೇವಲ 29 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 52 ರನ್ಗಳಿಸಿದರು. ಜೋರ್ಡಾನ್ ಸಿಲ್ಕ್ 27, ಸ್ಟಿವ್ ಸ್ಮಿತ್ 21 ರನ್ಗಳಿಸಿದರು.