ಕರ್ನಾಟಕ

karnataka

ETV Bharat / sports

ಕೊಹ್ಲಿ ವಿರುದ್ಧ ಬಯೋ ಬಬಲ್​ ಉಲ್ಲಂಘನೆ ಆರೋಪ ಮಾಡಿದ ಮಾಧ್ಯಮಗಳ ವಿರುದ್ಧ ಬೇಬಿ ಸ್ಟೋರ್​ ಓನರ್​ ಕಿಡಿ

ಕ್ರಿಕೆಟಿಗರ ಜೊತೆ ಕಳೆದ ಸಮಯವನ್ನು ತಮ್ಮ ಕುಟುಂಬದೊಂದಿಗೆ ಹಂಚಿಕೊಳ್ಳಲು ಬಯಸಿ ಅವರಿಬ್ಬರ ಜೊತೆ ನಮ್ಮ ಸಿಬ್ಬಂದಿ ಒಂದೆರಡು ಫೋಟೋ ತೆಗೆದುಕೊಂಡರು. ಅಲ್ಲದೆ ಅವರು ನಮ್ಮ ಅಂಗಡಿಯನ್ನೇ ಆಯ್ಕೆ ಮಾಡಿದ್ದಕ್ಕೆ ನಾವು ಕೂಡ ಹೆಮ್ಮೆ ಪಡುತ್ತೇವೆ ಎಂದು ತೋರಿಸಿಕೊಳ್ಳಲು ಅದನ್ನು ಸಾಮಾಜಿಕ ಜಾಲಾತಾಣದಲ್ಲಿ ಪೋಸ್ಟ್​ ಮಾಡಿದ್ದೆವು ಎಂದು ಸ್ಪೋರ್ಟ್ಸ್​ ಟುಡೇಗೆ ನೀಡಿದ ಸಂದರ್ಶನದಲ್ಲಿ ಶಾಪ್ ಮಾಲೀಕರು ಹೇಳಿದ್ದಾರೆ.

ವಿರಾಟ್​ ಕೊಹ್ಲಿ
ವಿರಾಟ್​ ಕೊಹ್ಲಿ

By

Published : Jan 5, 2021, 9:12 PM IST

Updated : Jan 5, 2021, 10:57 PM IST

ಸಿಡ್ನಿ: ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ವಿರುದ್ಧ ಬಯೋ ಬಬಲ್​ ಉಲ್ಲಂಘನೆ ಮಾಡಿದ್ದಾರೆಂದು ಆರೋಪಿಸಿರುವ ಆಸ್ಟ್ರೇಲಿಯಾದ ಮಾಧ್ಯಮಗಳ ವಿರುದ್ಧ ಕ್ರಿಕೆಟಿಗರು ಭೇಟಿ ನೀಡಿದ್ದ ಬೇಬಿ ಸ್ಟೋರ್​ ಮಾಲೀಕರು​ ಕಿಡಿಕಾರಿದ್ದಾರೆ.

ಡಿಸೆಂಬರ್​ 7ರಂದು ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ಸಿಡ್ನಿಯ ಬಂಡಿ ಜಂಕ್ಷನ್​ನಲ್ಲಿರುವ ಬೇಬಿ ಸ್ಟೋರ್​ಗೆ ಭೇಟಿ ನೀಡಿದ್ದರು. ಆ ವೇಳೆ ಶಾಪ್​ನ ಕೆಲವು ಸಿಬ್ಬಂದಿ ಅವರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಆದರೆ ಇದನ್ನು ಆಸ್ಟ್ರೇಲಿಯಾ ಮಾಧ್ಯಮಗಳು ಕೊಹ್ಲಿ ಮತ್ತು ಹಾರ್ದಿಕ್ ಬಯೋ ಬಬಲ್ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಒಂದು ತಿಂಗಳ ನಂತರ ಅಂದರೆ ಭಾತರತೀಯ 5 ಆಟಗಾರರ ಬಯೋ ಬಬಲ್​ ಉಲ್ಲಂಘನೆ ಪ್ರಕರಣದ ನಂತರ ವರದಿ ಮಾಡಿದ್ದವು. ಅದರೆ ಈ ಆರೋಪವನ್ನು ಶಾಪ್​ ಮಾಲೀಕರಾದ ನಾಥನ್​ ಪೊಂಗ್ರಾಸ್ ಅಲ್ಲಗಳೆದಿದ್ದಾರೆ.

"ಅವರಿಬ್ಬರು ಶಾಪ್​ನಲ್ಲಿ ಕೆಲ ಸಮಯ ಮಾತ್ರ ಕಳೆದಿದ್ದರು. ಅಲ್ಲದೆ ಆ ಸಮಯದಲ್ಲಿ ನ್ಯೂಸ್​ ಸೌತ್​ ವೇಲ್ಸ್​ನಲ್ಲಿ ಯಾವುದೇ ನಿರ್ಬಂಧಗಳಿರಲಿಲ್ಲ. ನಾವು ಅವರಿಗೆ ಕೆಲವು ವಸ್ತುಗಳನ್ನು ಗಿಫ್ಟ್​ ನೀಡಲು ಬಯಸಿದ್ದೆವು. ಆದರೆ ಅವರು ಕೊಳ್ಳುವ ಎಲ್ಲಾ ವಸ್ತುಗಳಿಗೂ ಹಣ ನೀಡತ್ತೇವೆಂದರು. ಈ ಸಮಯದಲ್ಲಿ ಅವರು ನಮ್ಮೊಂದಿಗೆ ತುಂಬಾ ಉದಾರರಾಗಿದ್ದರು. ನಮ್ಮ ಸಿಬ್ಬಂದಿ ಜೊತೆ ಮಾತನಾಡುತ್ತಾ ಸಮಯ ಕಳೆದಿದ್ದರು.

ಇನ್ನು ಕ್ರಿಕೆಟಿಗರ ಜೊತೆ ಕಳೆದ ಸಮಯವನ್ನು ತಮ್ಮ ಕುಟುಂಬದೊಂದಿಗೆ ಹಂಚಿಕೊಳ್ಳಲು ಬಯಸಿ ಅವರಿಬ್ಬರ ಜೊತೆ ನಮ್ಮ ಸಿಬ್ಬಂದಿ ಒಂದೆರಡು ಫೋಟೋ ತೆಗೆದುಕೊಂಡರು. ಅಲ್ಲದೆ ಅವರು ನಮ್ಮ ಅಂಗಡಿಯನ್ನೇ ಆಯ್ಕೆ ಮಾಡಿದ್ದಕ್ಕೆ ನಾವು ಕೂಡ ಹೆಮ್ಮೆ ಪಡುತ್ತೇವೆ ಎಂದು ತೋರಿಸಿಕೊಳ್ಳಲು ಅದನ್ನು ಸಾಮಾಜಿಕ ಜಾಲಾತಾಣದಲ್ಲಿ ಪೋಸ್ಟ್​ ಮಾಡಿದ್ದೆವು ಎಂದು ಸ್ಪೋರ್ಟ್ಸ್​ ಟುಡೇಗೆ ನೀಡಿದ ಸಂದರ್ಶನದಲ್ಲಿ ಶಾಪ್ ಮಾಲೀಕರು ಹೇಳಿದ್ದಾರೆ.

ಆದರೆ ಈ ಸಂದರ್ಭದಲ್ಲಿ ನಮ್ಮ ಸಿಬ್ಬಂದಿಗೆ ಕ್ರಿಕೆಟಿಗರ ಕೈ ಕುಲುಕಲು ಅವಕಾಶ ನೀಡಲಿಲ್ಲ. ಇನ್ನು ಅವರಿಬ್ಬರು ಮಾಸ್ಕ್​ ತೊಟ್ಟಿಲ್ಲ ಎನ್ನುವುದು ದೊಡ್ಡ ವಿಚಾರವಲ್ಲ. ಏಕೆಂದರೆ ಆ ವೇಳೆ ನ್ಯೂ ಸೌತ್​ ವೇಲ್ಸ್​ನಲ್ಲಿ ಕೊರೊನಾ ಪ್ರಕರಣವಿರಲಿಲ್ಲ. ಇಡೀ ಬೀದಿಯಲ್ಲಿ ಹುಡುಕಿದರೆ 50 ಮಂದಿ ಮಾತ್ರ ಮಾಸ್ಕ್​ ಧರಿಸಿದವರು ಸಿಗುತ್ತಿದ್ದರು. ಅವರೂ ಕೂಡ ವಯಸ್ಸಾದವರು. ಆದರೆ ಆಸ್ಟ್ರೇಲಿಯಾದ ಮಾಧ್ಯಮಗಳು ಇದನ್ನು ದೊಡ್ಡ ಸುದ್ದಿ ಮಾಡ ಹೊರಟಿರುವುದು ನಿಜಕ್ಕೂ ಅವಮಾನಕರ ಸಂಗತಿ ಎಂದು ಪೊಂಗ್ರಾಸ್​ ಹೇಳಿದ್ದಾರೆ.

Last Updated : Jan 5, 2021, 10:57 PM IST

ABOUT THE AUTHOR

...view details