ಮುಂಬೈ: ಭಾರತ ತಂಡದ ಸ್ವಿಂಗ್ ಸ್ಪೆಷಲಿಸ್ಟ್ ಭುವನೇಶ್ವರ್ ಕುಮಾರ್ ಚೆಂಡಿನ ಹೊಳಪಿಗೆ ಬೆವರು ಬಳಕೆ ಮಾಡಬಹುದು ಎಂಬ ಮಾತಿಗೆ ಪ್ರತಿಕ್ರಿಯಿಸಿದ್ದು, ಪ್ರಪಂಚದೆಲ್ಲೆಡೆ ಬೆವರು ಬಳಕೆ ಮಾಡುವುದು ಅಸಾಧ್ಯ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಕೋವಿಡ್ 19 ವೈರಸ್ ಹರಡುವ ಭೀತಿಯಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ತಾತ್ಕಾಲಿಕವಾಗಿ ಚೆಂಡು ಹೊಳಪು ಮಾಡಲು ಎಂಜಲು ಬಳಸುವುದನ್ನು ನಿಷೇಧ ಮಾಡಿದೆ. ಇದರ ಬದಲಾಗಿ ಬೆವರು ಬಳಕೆ ಮಾಡಲು ಅವಕಾಶ ನೀಡಿದೆ. ಆದರೆ ಭುವನೇಶ್ವರ್ ಕುಮಾರ್ ಪ್ರಪಂಚದೆ ಕೆಲವೆಡೆ ಬೆವರು ಬಾರದಿರುವ ಸಂದರ್ಭದಲ್ಲಿ ಬೌಲರ್ಗಳಿಗೆ ಕಷ್ಟವಾಗುತ್ತದೆ ಎಂದಿದ್ದಾರೆ.
"ಪ್ರಪಂಚದ ಎಲ್ಲೆಡೆ ಬೆವರು ಬಳಕೆ ಸಾಧ್ಯವಿಲ್ಲ, ಖಂಡಿತವಾಗಿಯೂ ಇದು ಸವಾಲಿನ ಸಂಗತಿಯಾಗಿದೆ. ಶೀಘ್ರದಲ್ಲೇ ಈ ಆಲೋಚನೆ ಉತ್ತಮಗೊಳ್ಳುತ್ತವೆ ಎಂದು ಭಾವಿಸುತ್ತೇವೆ" ಎಂದು ಕುಮಾರ್ ಭಾನುವಾರ ಅಭಿಮಾನಿಗಳೊಂದಿಗೆ ನಡೆಸಿದ ಟ್ವಿಟರ್ ಚಾಟ್ನಲ್ಲಿ ಹೇಳಿದ್ದಾರೆ.