ನವದೆಹಲಿ:ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದು, ಅವರ ಅಗಲಿಕೆಗೆ ಭಾರತ ಕ್ರಿಕೆಟ್ ತಂಡದ ಆಟಗಾರರು ಕಂಬನಿ ಮಿಡಿದಿದ್ದಾರೆ.
ಸುಷ್ಮಾ ಅಗಲಿಕೆಗೆ ಕಂಬನಿ ಮಿಡಿದಿರುವ ಟೀಂ ಇಂಡಿಯಾ ಆಟಗಾರ ಸುರೇಶ್ ರೈನಾ, ಉಗ್ರ, ಶೀಘ್ರ ಫಲಿತಾಂಶ ಮತ್ತು ಸದಾ ಜನರ ನಾಯಕಿಯಾಗಿರುತ್ತಿದ್ದ ಸುಷ್ಮಾ ಸ್ವರಾಜ್ ನಿಜವಾದ ನಾಯಕಿಯಾಗಿದ್ದರು. ಈಗಲೂ ಅವರ ಸಾವಿನ ಸುದ್ದಿಯನ್ನ ನಂಬಲಾಗುತ್ತಿಲ್ಲ. ಅವರ ಅಗಲಿಕೆ ದೇಶಕ್ಕೆ ತುಂಬಲಾರದ ನಷ್ಟ ಎಂದು ಕಂಬನಿ ಮಿಡಿದಿದ್ದಾರೆ.
ಟೀಂ ಇಂಡಿಯಾ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ಕೂಡ ಟ್ವೀಟ್ ಮಾಡಿದ್ದು, ಛೇ ಎಂತಹ ದುಃಖದ ವಿಷಯ. ಸುಷ್ಮಾ ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ನೋವು ತಡೆದುಕೊಳ್ಳುವ ಶಕ್ತಿ ಆ ಭಗವಂತ ಕುರಣಿಸಲಿ. ಓಂ ಶಾಂತಿ ಎಂದು ಟ್ವೀಟ್ ಮಾಡಿದ್ದಾರೆ.
ಬಿಜೆಪಿ ಸಂಸದ ಹಾಗೂ ಮಾಜಿ ಕ್ರಿಕೆಟ್ ಆಟಗಾರ ಗೌತಮ್ ಗಂಭಿರ್ ಟ್ವೀಟ್ ಮಾಡಿ, ಸುಶ್ಮಾ ಅವರ ದಿಢೀರ್ ನಿರ್ಗಮನದಿಂದಾಗಿ ದುಃಖತಪ್ತನಾಗಿದ್ದೇನೆ. ಹಿರಿಯ ರಾಜಕಾರಣಿ ಹಾಗೂ ಬಿಜೆಪಿಯ ಒಂದು ಕಂಬವಾಗಿದ್ದರು. ಎಲ್ಲರೂ ಅವರನ್ನು ಪ್ರೀತಿಸುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಮಂದಿಗೆ ನೆರವಿನ ಹಸ್ತ ಚಾಚಿದ್ದ ಕೀರ್ತಿ ಅವರದ್ದು. ಅವರ ಕುಟುಂಬದವರು ಸ್ನೇಹಿತರಿಗೆ ನೋವು ಸಹಿಸಿಕೊಳ್ಳುವ ಶಕ್ತಿ ದೇವರು ಕರುಣಿಸಲಿ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.
ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಮೊಹಮ್ಮದ್ ಕೈಫ್, ನಾನು ವೆಸ್ಟ್ ಇಂಡೀಸ್ ಪ್ರವಾಸದಲ್ಲಿದ್ದೇನೆ. ಇದೀಗ ತಾನೇ ಸುಷ್ಮಾ ಸ್ವರಾಜ್ ಅವರ ನಿಧನದ ಸುದ್ದಿ ಕೇಳಿ ಶಾಕ್ ಆಯ್ತು ಎಂದಿದ್ದಾರೆ.
ಟೀಂ ಇಂಡಿಯಾ ಮಾಜಿ ಅಟಗಾರ ವಿವಿಎಸ್ ಲಕ್ಷ್ಮಣ್ ಕೂಡ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.