ಅಹಮದಾಬಾದ್:ಇಂಗ್ಲೆಂಡ್ ವಿರುದ್ಧದ 4ನೇ ಟಿ20 ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಸೂರ್ಯಕುಮಾರ್ ಯಾದವ್ 57ರನ್ಗಳಿಕೆ ಮಾಡಿದ್ದ ವೇಳೆ ವಿವಾದಿತ ರೀತಿಯಲ್ಲಿ ವಿಕೆಟ್ ಒಪ್ಪಿಸಿದ್ದು, ಇದೀಗ ಚರ್ಚೆಗೆ ಗ್ರಾಸವಾಗಿದೆ.
ಸ್ಯಾಮ್ ಕರ್ರನ್ ಎಸೆದ ಓವರ್ನಲ್ಲಿ ಡೇವಿಡ್ ಮಲನ್ ಹಿಡಿದ ಕ್ಯಾಚ್ ವಿವಾದಿತವಾಗಿತ್ತು. ಈ ವೇಳೆ ಪರಿಶೀಲನೆ ನಡೆಸಿದ ಥರ್ಡ್ ಅಂಪೈರ್ ಔಟ್ ಎಂದು ಘೋಷಣೆ ಮಾಡಿದ್ರು. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದು, ಅಂಪೈರ್ ಅನಂತ್ಪದ್ಮನಾಭನ್ ವಿಚಾರವಾಗಿ ಟ್ರೋಲ್ ಮಾಡುತ್ತಿದ್ದಾರೆ.
ಥರ್ಡ್ ಅಂಪೈರ್ ಕಣ್ಣು ಮುಚ್ಚಿಕೊಂಡು ಇಂತಹ ನಿರ್ಧಾರ ನೀಡಿದ್ದಾರೆ ಎಂದು ವಿರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿದ್ರೆ, ವಾಸೀಮ್ ಜಾಫರ್ ಕೂಡ ಅಂಪೈರ್ ನಿರ್ಧಾರದ ವಿರುದ್ಧ ಕಿಡಿ ಕಾರಿದ್ದಾರೆ.
ಸದ್ಯ ಇದೇ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದು, ಅನೇಕರು ತಮ್ಮದೇ ರೀತಿಯಲ್ಲಿ ವ್ಯಾಖ್ಯಾನ ನೀಡಿ ಅಂಪೈರ್ ವಿರುದ್ಧ ಕಿಡಿ ಕಾರುತ್ತಿದ್ದಾರೆ. ವಾಷಿಂಗ್ಟನ್ ಸುಂದರ್ ಸಿಡಿಸಿದ ಸಿಕ್ಸರ್ ಕೂಡ ಬೌಂಡರಿ ಗೆರೆಯಲ್ಲಿ ಕ್ಯಾಚ್ ಆಗಿದ್ದು, ಇದು ಕೂಡ ವಿವಾದಿತ ಔಟ್ ಎಂದು ಊಹಿಸಲಾಗಿದೆ.
ಇದನ್ನೂ ಓದಿ: ಮಿಂಚಿದ ಸೂರ್ಯ, ಶ್ರೇಯಸ್: ಇಂಗ್ಲೆಂಡ್ ಗೆಲುವಿಗೆ 186 ರನ್ ಟಾರ್ಗೆಟ್