ಕರ್ನಾಟಕ

karnataka

ETV Bharat / sports

ಐಯ್ಯರ್​ಗೆ ಗಾಯ: ಏಕದಿನ ಕ್ರಿಕೆಟ್​ಗೂ ಸೂರ್ಯಕುಮಾರ್ ಪದಾರ್ಪಣೆ ಸಾಧ್ಯತೆ

ಅಹಮದಾಬಾದ್​ನಲ್ಲಿ ನಡೆದಿದ್ದ ಟಿ-20 ಸರಣಿಯಲ್ಲಿ ಮೂರು ಪಂದ್ಯಗಳಲ್ಲಿ ಆಡುವ ಅವಕಾಶ ಪಡೆದಿದ್ದ ಸೂರ್ಯಕುಮಾರ್​ಗೆ 2 ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿತ್ತು. ಮೊದಲ ಪಂದ್ಯದಲ್ಲೇ 31 ಎಸೆತಗಳನ್ನು ಎದುರಿಸಿ 57 ರನ್ ‌ಗಳಿಸಿದ್ದ ಅವರು, ಕೊನೆಯ ಟಿ-20ಯಲ್ಲಿ 17 ಎಸೆತಗಳಲ್ಲಿ 32 ರನ್​ ಗಳಿಸಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದರು.

ಸೂರ್ಯಕುಮಾರ್ ಯಾದವ್​
ಸೂರ್ಯಕುಮಾರ್ ಯಾದವ್​

By

Published : Mar 24, 2021, 10:38 PM IST

ಪುಣೆ:ಇಂಗ್ಲೆಂಡ್ ವಿರುದ್ಧದ ಮೊದಲ ಪಂದ್ಯದ ಫೀಲ್ಡಿಂಗ್ ವೇಳೆ ಗಾಯಗೊಂಡಿರುವ ಶ್ರೇಯಸ್​ ಐಯ್ಯರ್​ ಮುಂದಿನ 2 ಪಂದ್ಯಗಳಿಂದ ಹೊರಬಿದ್ದಿದ್ದಾರೆ. ಅವರ ಜಾಗಕ್ಕೆ ಈಗಾಗಲೇ ಟಿ-20 ಕ್ರಿಕೆಟ್​ನಲ್ಲಿ ಪದಾರ್ಪಣೆ ಸರಣಿಯಲ್ಲಿ ತಮ್ಮ ತಾಕತ್ತು ಪ್ರದರ್ಶಿಸಿರುವ ಸೂರ್ಯಕುಮಾರ್ ಯಾದವ್,​ ಶುಕ್ರವಾರ ನಡೆಯುವ 2ನೇ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ.

ಅಹಮದಾಬಾದ್​ನಲ್ಲಿ ನಡೆದಿದ್ದ ಟಿ-20 ಸರಣಿಯಲ್ಲಿ ಮೂರು ಪಂದ್ಯಗಳಲ್ಲಿ ಆಡುವ ಅವಕಾಶ ಪಡೆದಿದ್ದ ಸೂರ್ಯಕುಮಾರ್​ಗೆ 2 ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿತ್ತು. ಮೊದಲ ಪಂದ್ಯದಲ್ಲೇ 31 ಎಸೆತಗಳನ್ನು ಎದುರಿಸಿ 57 ರನ್ ‌ಗಳಿಸಿದ್ದ ಅವರು, ಕೊನೆಯ ಟಿ-20ಯಲ್ಲಿ 17 ಎಸೆತಗಳಲ್ಲಿ 32 ರನ್​ ಗಳಿಸಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದರು.

ಇದೀಗ 4ನೇ ಕ್ರಮಾಂಕದಲ್ಲಿ ಆಡುತ್ತಿದ್ದ ಶ್ರೇಯಸ್ ಐಯ್ಯರ್ ಭುಜದ ಗಾಯಕ್ಕೆ ತುತ್ತಾಗಿರುವುದರಿಂದ ಆ ಸ್ಥಾನಕ್ಕೆ ಸೂರ್ಯಕುಮಾರ್​ ಯಾದವ್​ ಆಯ್ಕೆ ಬಹುತೇಕ ಖಚಿತ ಎನ್ನಲಾಗುತ್ತಿದೆ.

ಸೂರ್ಯಕುಮಾರ್ ಯಾದವ್​ ಕೂಡ ಕಳೆದ 3 ಐಪಿಎಲ್​ಗಳಲ್ಲೂ ಸತತ 400+ ರನ್​ ಬಾರಿಸಿದ್ದರು. ಅವರು ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 14 ಶತಕ ಹಾಗೂ 26 ಅರ್ಧಶತಕ ಸೇರಿ 5326 ರನ್, ಲಿಸ್ಟ್ ಎ(50 ಓವರ್​) ಕ್ರಿಕೆಟ್‌ನಲ್ಲಿ 97 ಪಂದ್ಯಗಳಲ್ಲಿ 3 ಶತಕ ಹಾಗೂ 17 ಅರ್ಧಶತಕ ಸಹಿತ 2779 ರನ್. ಐಪಿಎಲ್​ ಸೇರಿ 170 ಟಿ-20 ಪಂದ್ಯಗಳಿಂದ 3567 ರನ್ ಗಳಿಸಿದ್ದಾರೆ.

ಭಾರತ ತಂಡ ಈಗಾಗಲೇ ಮೊದಲ ಏಕದಿನ ಪಂದ್ಯವನ್ನು 66 ರನ್​ಗಳಿಂದ ಗೆದ್ದು ಸರಣಿಯಲ್ಲಿ 1-0ಯಲ್ಲಿ ಮುನ್ನಡೆ ಸಾಧಿಸಿದೆ. ಶುಕ್ರವಾರ ನಡೆಯುವ ಪಂದ್ಯದಲ್ಲಿ ಗೆದ್ದರೆ ಸರಣಿ ಭಾರತದ ಪಾಲಾಗಲಿದೆ. ಈಗಾಗಲೇ ಕೊಹ್ಲಿ ಬಳಗ ಟೆಸ್ಟ್​ ತಂಡವನ್ನು 3-1ರಲ್ಲಿ, ಟಿ-20 ಸರಣಿಯನ್ನು 3-2ರಲ್ಲಿ ಗೆದ್ದಿದೆ.

ಇದನ್ನು ಓದಿ: ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ಅಯ್ಯರ್​ ಔಟ್​.. 14ನೇ ಐಪಿಎಲ್​ಗೂ ಡೌಟ್‌!

ABOUT THE AUTHOR

...view details