ಕರ್ನಾಟಕ

karnataka

ETV Bharat / sports

ಇಂಗ್ಲೆಂಡ್​ ಆಟಗಾರರಿಗೆ ವರ್ಣಭೇದ ನೀತಿ ವಿರೋಧಿ ತರಬೇತಿ ಕೋರ್ಸ್‌: ಕಾರಣ! - ವೃತ್ತಿಪರ ಕ್ರಿಕೆಟಿಗರ ಸಂಘ

ಕ್ರಿಕೆಟ್​ ಆಟದ ಸಂದರ್ಭದಲ್ಲಿ ಮೂರನೇ ಒಂದು ಭಾಗದಷ್ಟು ಏಷ್ಯನ್​ ಮತ್ತು ಅಲ್ಪಸಂಖ್ಯಾತ ಜನಾಂಗೀಯ ಆಟಗಾರರು ಜನಾಂಗೀಯ ನಿಂದನೆಯನ್ನು ಎದುರಿಸಿದ್ದಾರೆ ಎಂದು ವೃತ್ತಿಪರ ಕ್ರಿಕೆಟಿಗರ ಸಂಘದ ಸಮೀಕ್ಷೆಯಲ್ಲಿ ತಿಳಿದು ಬಂದಿದೆ.

English cricket
ವರ್ಣಭೇದ ನೀತಿ ವಿರೋಧಿ ತರಬೇತಿ

By

Published : Jan 28, 2021, 1:56 PM IST

ಲಂಡನ್:ಕ್ರಿಕೆಟ್​ ಆಟದ ಸಂದರ್ಭದಲ್ಲಿ ಮೂರನೇ ಒಂದು ಭಾಗದಷ್ಟು ಏಷ್ಯನ್ಮತ್ತು ಅಲ್ಪಸಂಖ್ಯಾತ ಜನಾಂಗೀಯ ಆಟಗಾರರು ಜನಾಂಗೀಯ ನಿಂದನೆ ಎದುರಿಸಿದ್ದಾರೆ ಎಂದು ಸಮೀಕ್ಷೆಯೊಂದು ಬಹಿರಂಗಪಡಿಸಿದ ನಂತರ ಇಂಗ್ಲೆಂಡ್ ಕ್ರಿಕೆಟಿಗರು (ಪುರುಷರು ಮತ್ತು ಮಹಿಳೆಯರು) ಈ ವರ್ಷ ವರ್ಣಭೇದ ನೀತಿ ವಿರೋಧಿ ತರಬೇತಿ ಕೋರ್ಸ್‌ಗಳಿಗೆ ಒಳಗಾಗಲಿದ್ದಾರೆ.

ದಿ ಟೆಲಿಗ್ರಾಫ್‌ನ ವರದಿಯ ಪ್ರಕಾರ, "ಕೋರ್ಸ್‌ಗಳು ಡ್ರೆಸ್ಸಿಂಗ್ ರೂಮ್​ನಲ್ಲಿ ಇತರ ಆಟಗಾರರೊಂದಿಗೆ ಯಾವರೀತಿ ವರ್ತಿಸಬೇಕು ಎಂಬ ಸಂಸ್ಕೃತಿಯನ್ನು ಒಳಗೊಳ್ಳುತ್ತವೆ. ನಡವಳಿಕೆಯನ್ನು ವಿವಿಧ ಸಂಸ್ಕೃತಿಗಳಿಂದ ಹೇಗೆ ವ್ಯಾಖ್ಯಾನಿಸಬಹುದು ಎಂಬುದರ ಬಗ್ಗೆ ಜಾಗೃತಿ ಮೂಡಿಸುತ್ತದೆ".

"ವೃತ್ತಿಪರ ಕ್ರಿಕೆಟಿಗರ ಸಂಘವು ನಡೆಸಿದ ಸಮೀಕ್ಷೆಯಲ್ಲಿ, ಮೂರನೇ ಒಂದು ಭಾಗದಷ್ಟು ಏಷ್ಯನ್ಮತ್ತು ಅಲ್ಪಸಂಖ್ಯಾತ ಜನಾಂಗೀಯ ಆಟಗಾರರು ಜನಾಂಗೀಯ ನಿಂದನೆಯನ್ನು ಎದುರಿಸಿದ್ದಾರೆ" ಎಂದು ವರದಿಯಾಗಿದೆ.

"ಕೇವಲ 173 ವೃತ್ತಿಪರ ಆಟಗಾರರು ಮಾತ್ರ ಸಮೀಕ್ಷೆಗೆ ಉತ್ತರಿಸಿದ್ದಾರೆ. ಇದು ಕ್ರಿಕೆಟಿಗರು ವರ್ಣಭೇದ ನೀತಿ ವಿರೋಧಿ ಶಿಕ್ಷಣದ ಮಹತ್ವ ಅರಿತುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಅವರು ಇನ್ನೂ ಕೈಗೊಳ್ಳಬೇಕಾದ ಕೆಲಸದ ಮಟ್ಟವನ್ನು ತೋರಿಸುತ್ತದೆ" ಎಂದು ವರದಿಯಲ್ಲಿ ಸೇರಿಸಲಾಗಿದೆ.

ಇನ್ನು ಸಮೀಕ್ಷೆಗೆ ಪ್ರತಿಕ್ರಿಯಿಸಿದವರಲ್ಲಿ, 24 ಜನರನ್ನು ಕಪ್ಪು, ಏಷ್ಯನ್ ಅಥವಾ ಜನಾಂಗೀಯ ಅಲ್ಪಸಂಖ್ಯಾತ ಹಿನ್ನೆಲೆಯಿಂದ ಗುರುತಿಸಲಾಗಿದೆ. ಒಟ್ಟಾರೆಯಾಗಿ, BAME (Black, Asian, and minority ethnic) ಹಿನ್ನೆಲೆಯಿಂದ ಬಂದ 12 ಜನರು ಕೆಲವು ರೀತಿಯ ವರ್ಣಭೇದ ನೀತಿಯನ್ನು ಅನುಭವಿಸಿದ್ದಾರೆ ಎಂದು ತಿಳಿದು ಬಂದಿದೆ.

ಬ್ಲ್ಯಾಕ್ ​ - ಅಮೇರಿಕನ್ ಜಾರ್ಜ್ ಫ್ಲಾಯ್ಡ್ ಅವರ ಮರಣದ ನಂತರ ಬ್ಲ್ಯಾಕ್ ಲೈವ್ಸ್ ಮ್ಯಾಟರ್ (ಬಿಎಲ್ಎಂ) ಆಂದೋಲನಕ್ಕೆ ಅನೇಕ ಕ್ರೀಡಾಪಟುಗಳಿಂದ ಬೆಂಬಲವನ್ನು ಪಡೆಯಿತು.

ABOUT THE AUTHOR

...view details