ಮುಂಬೈ: ವಿಶ್ವದ ಅತ್ಯಂತ ಪ್ರಸಿದ್ಧ ಹಾಗೂ ದೊಡ್ಡ ಟಿ20 ಲೀಗ್ ಆಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ನ 13ನೇ ಆವೃತ್ತಿಯನ್ನು ಕೊರೊನಾ ಮಧ್ಯೆಯೇ ದಾದಾ ನೇತೃತ್ವದ ಬಿಸಿಸಿಐ ಭರ್ಜರಿಯಾಗಿ ಮುಗಿಸಿದೆ. ಇದೀಗ ಅಭಿಮಾನಿಗಳಿಗೆ ಖುಷಿ ವಿಚಾರವೊಂದು ಕೇಳಿ ಬರುತ್ತಿದ್ದು, 2021ರ ಐಪಿಎಲ್ನಲ್ಲಿ 8ರ ಬದಲಾಗಿ 9 ತಂಡಗಳು ಸ್ಪರ್ಧಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಮುಂದಿನ ನಾಲ್ಕೇ ತಿಂಗಳಲ್ಲಿ ಮತ್ತೊಂದು ಐಪಿಎಲ್ ಲೀಗ್ ನಡೆಯಲಿದ್ದು, ಅದಕ್ಕೂ ಮುನ್ನ ಜನವರಿ ಅಥವಾ ಫೆಬ್ರವರಿಯಲ್ಲಿ ಐಪಿಎಲ್ ಮೆಗಾ ಆ್ಯಕ್ಷನ್ ನಡೆಯಲಿದೆ. ಇದರಲ್ಲಿ ಹಿಂದಿನ ಪ್ರಕ್ರಿಯೆಯಂತೆ ಫ್ರಾಂಚೈಸಿಗಳು 3 ಆಟಗಾರರನ್ನು ಉಳಿಸಿಕೊಂಡು, ಇಬ್ಬರು ಆಟಗಾರರನ್ನು ಆರ್ಟಿ ಕಾರ್ಡ್ ಬಳಸಿ ತಂಡಕ್ಕೆ ಸೇರಿಸಿಕೊಳ್ಳಬಹುದುದಾಗಿದೆ.
ಅದಕ್ಕೂ ಹೆಚ್ಚಿನ ಖುಷಿಕೊಡುವ ವಿಚಾರವೆಂದರೆ ಮುಂದಿನ ಐಪಿಎಲ್ನಲ್ಲಿ 9ನೇ ತಂಡ ಐಪಿಎಲ್ಗೆ ಸೇರ್ಪಡೆಗೊಳ್ಳಲಿದೆ. ಗುಜರಾತ್ ರಾಜ್ಯದ ಅಹ್ಮದಾಬಾದ್ ನಗರದ ತಂಡ ಐಪಿಎಲ್ನಲ್ಲಿ ಸ್ಪರ್ಧಸಲಿದೆ.