ನವದೆಹಲಿ:ದೇಶದಲ್ಲಿ ಲಾಕ್ಡೌನ್ ಹೇರಿರುವ ಕಾರಣ ಎಲ್ಲವೂ ಬಂದ್ ಆಗಿದೆ. ಇಂತಹ ಸ್ಥಿತಿಯಲ್ಲಿ ತಲೆಕೂದಲು ಕತ್ತರಿಸಿಕೊಳ್ಳಲು ಇನ್ನೊಬ್ಬರ ಸಹಾಯಕ್ಕೆ ಮೊರೆ ಹೋಗಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಸೆಲಿಬ್ರೆಟಿಗಳಿಗೂ ಈ ಸಂಕಷ್ಟ ಬಂದಿರುವ ಕಾರಣ ಪತ್ನಿಯರ ಕೈಯಲ್ಲಿ ತಲೆಕೊಟ್ಟು ಕುಳಿತುಕೊಳ್ಳುತ್ತಿದ್ದಾರೆ.
ಪತ್ನಿಯ ಕೈಗೆ ತಲೆಕೊಟ್ಟ ಸುರೇಶ್ ರೈನಾ; ಕೊನೆಗೆ ಅವರು ಕಾಣಿಸಿದ್ದು ಹೀಗೆ.. - ಹೇರ್ ಕಟಿಂಗ್ ರೈನಾ
ಲಾಕ್ಡೌನ್ ತಂದಿಟ್ಟಿರುವ ಸಂಕಷ್ಟಕ್ಕೆ ಇಡೀ ದೇಶವೇ ಬೆಚ್ಚಿಬಿದ್ದಿದೆ. ಸೆಲಿಬ್ರಿಟಿಗಳಿಗೂ ಇದರ ಕಾವು ಜೋರಾಗಿ ತಟ್ಟಿದ್ದು, ಪತ್ನಿಯರಿಂದ ತಲೆಕೂದಲು ತೆಗೆಸಿಕೊಳ್ತಿದ್ದಾರೆ.
![ಪತ್ನಿಯ ಕೈಗೆ ತಲೆಕೊಟ್ಟ ಸುರೇಶ್ ರೈನಾ; ಕೊನೆಗೆ ಅವರು ಕಾಣಿಸಿದ್ದು ಹೀಗೆ.. Suresh Raina](https://etvbharatimages.akamaized.net/etvbharat/prod-images/768-512-6764796-thumbnail-3x2-wdfdfd.jpg)
Suresh Raina
ಕಳೆದ ಕೆಲ ದಿನಗಳ ಹಿಂದೆ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ತಮ್ಮ ಹೆಂಡತಿ ಅನುಷ್ಕಾ ಶರ್ಮಾ ಕೈಯಿಂದ ತಲೆಕೂದಲು ತೆಗೆಸಿಕೊಂಡಿದ್ದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಇದೀಗ ಮತ್ತೋರ್ವ ಆಟಗಾರ ಹೆಂಡತಿ ಕೈಯಿಂದ ತಲೆಕೂದಲು ತೆಗೆಸಿಕೊಂಡಿದ್ದಾರೆ.
ಸುರೇಶ್ ರೈನಾ ಪತ್ನಿ ಪ್ರಿಯಾಂಕಾ ಟ್ರಿಮ್ಮರ್ ಮೂಲಕ ರೈನಾ ಕೂದಲಿಗೆ ಹೊಸ ಲುಕ್ ಕೊಟ್ಟಿದ್ದಾರೆ.
Last Updated : Apr 12, 2020, 5:56 PM IST