ಮುಂಬೈ: ಎರಡು ವರ್ಷಗಳ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮರಳಿದ್ದ ಸುರೇಶ್ ರೈನಾ 14ನೇ ಆವೃತ್ತಿಯ ತಮ್ಮ ಮೊದಲ ಪಂದ್ಯದಲ್ಲೇ ವಿಶೇಷ ದಾಖಲೆಗೆ ಪಾತ್ರರಾಗಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಗರಿಷ್ಠ ಅರ್ಧಶತಕ ಬಾರಿಸಿದ 3ನೇ ಬ್ಯಾಟ್ಸ್ಮನ್ ಎಂಬ ದಾಖಲೆಯನ್ನು ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಜೊತೆ ಹಂಚಿಕೊಂಡಿದ್ದಾರೆ.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ 2ನೇ ಪಂದ್ಯದಲ್ಲಿ ಅರ್ಧಶತಕ ಸಿಡಿಸುವ ಮೂಲಕ ಈ ದಾಖಲೆಗೆ ಪಾತ್ರರಾದರು. ಮಿಸ್ಟರ್ ಐಪಿಎಲ್ ಖ್ಯಾತಿಯ ರೈನಾ 36 ಎಸೆತಗಳಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್ಗಳ ಸಹಿತ 54 ರನ್ ಬಾರಿಸಿದರು.
ಇದು ರೈನಾ ಪಾಲಿನ 39 ಅರ್ಧಶತಕವಾಗಿದೆ. ಈಗಾಗಲೆ ಭಾರತ ತಂಡದ ಆರಂಭಿಕ ಬ್ಯಾಟ್ಸ್ಮನ್ ಶಿಖರ್ ಧವನ್ ಈ ದಾಖಲೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಶಿಖರ್ ಧವನ್ 42( ಇಂದಿನ ಪಂದ್ಯ ಸೇರಿಸಿ) ಅರ್ಧಶತಕ ಬಾರಿಸಿ ಅಗ್ರಸ್ಥಾನದಲ್ಲಿದ್ದಾರೆ. ಇವರನ್ನು ಹೊರೆತು ಪಡಿಸಿದರೆ ರೋಹಿತ್ ಮತ್ತು ಕೊಹ್ಲಿ 39 ಅರ್ಧಶತಕ ಬಾರಿಸಿದ್ದಾರೆ.
ಒಟ್ಟಾರೆ ಐಪಿಎಲ್‌ನಲ್ಲಿ ಸನ್ರೈಸರ್ಸ್ ತಂಡದ ನಾಯಕ ಡೇವಿಡ್ ವಾರ್ನರ್ ಕೇವಲ 142 ಇನ್ನಿಂಗ್ಸ್ಗಳಲ್ಲಿ 48 ಅರ್ಧಾಶತಕ ಬಾರಿಸಿ ಅಗ್ರಸ್ಥಾನದಲ್ಲಿದ್ದಾರೆ.
ಐಪಿಎಲ್‌ನಲ್ಲಿ ಅತೀ ಹೆಚ್ಚು ಅರ್ಧಶತಕ ಬಾರಿಸಿದ ಬ್ಯಾಟ್ಸ್ಮನ್
- ಡೇವಿಡ್ ವಾರ್ನರ್- 48(142 ಇನ್ನಿಂಗ್ಸ್)
- ಶಿಖರ್ ಧವನ್- 42(176)
- ವಿರಾಟ್ ಕೊಹ್ಲಿ- 39 (185)
- ಸುರೇಶ್ ರೈನಾ -39 (190)
- ರೋಹಿತ ಶರ್ಮಾ-39(196)
- ಎಬಿ ಡಿ ವಿಲಿಯರ್ಸ್- 38(157)
- ಗೌತಮ್ ಗಂಭೀರ್- 36(152)