ಕರ್ನಾಟಕ

karnataka

ETV Bharat / sports

ಪಿಎಂ, ಸಿಎಂ ಪರಿಹಾರ ನಿಧಿಗೆ 52 ಲಕ್ಷ ರೂ. ದೇಣಿಗೆ ನೀಡಿದ ರೈನಾ

ರಕ್ಕಸ ಸೋಂಕು ಕೊರೊನಾ ವಿರುದ್ಧ ಇಡೀ ವಿಶ್ವವೇ ಹೋರಾಟ ನಡೆಸಿದ್ದು, ಭಾರತ ಕೂಡ ತನ್ನ ದೇಶದ ಜನರ ರಕ್ಷಣೆಗಾಗಿ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತಿದೆ. ಈಗಾಗಲೇ ಲಗ್ಗೆ ಹಾಕಿರುವ ಈ ಮಹಾಮಾರಿ ವಿರುದ್ಧದ ಹೋರಾಟಕ್ಕಾಗಿ ಎಲ್ಲರೂ ಸಹಾಯ ಮಾಡುವಂತೆ ನಮೋ ಮನವಿ ಮಾಡಿಕೊಂಡಿದ್ದಾರೆ.

Suresh Raina Donates Rs 52 Lakh
Suresh Raina Donates Rs 52 Lakh

By

Published : Mar 28, 2020, 7:32 PM IST

ನವದೆಹಲಿ:ಡೆಡ್ಲಿ ವೈರಸ್​ ಕೊರೊನಾ ಪ್ರಪಂಚದಾದ್ಯಂತ ಮರಣಮೃದಂಗ ಬಾರಿಸುತ್ತಿದ್ದು, ಭಾರತದಲ್ಲೂ ಲಗ್ಗೆ ಹಾಕಿ ಅಟ್ಟಹಾಸ ಮೆರೆಯುತ್ತಿದೆ. ಕಿಲ್ಲರ್ ಕೊರೊನಾ ವಿರುದ್ಧ ಹೋರಾಟ ನಡೆಸಿರುವ ಭಾರತ ಈಗಾಗಲೇ 21 ದಿನಗಳ ಲಾಕ್​ಡೌನ್​ ಹೋರಾಟ ನಡೆಸಿದೆ.

ಕೊರೊನಾ ವಿರುದ್ಧ ಹೋರಾಟಕ್ಕಾಗಿ ಭಾರತೀಯರ ನೆರವು ಕೇಳಿರುವ ಪ್ರಧಾನಿ ನರೇಂದ್ರ ಮೋದಿ, ನಿಮ್ಮ ಕೈಯಿಂದ ಆದಷ್ಟು ಹಣಕಾಸಿನ ನೆರವು ನೀಡಿ ಎಂದು ಟ್ವೀಟ್​ ಮೂಲಕ ಮನವಿ ಮಾಡಿಕೊಂಡಿದ್ದಾರೆ. ದೇಶದ ಪ್ರಧಾನಿ ಮನವಿಗೆ ಸ್ಪಂದಿಸುತ್ತಿರುವ ಜನರು ಈಗಾಗಲೇ ತಮ್ಮ ಕೈಯಿಂದ ಆದಷ್ಟು ನೆರವು ನೀಡುತ್ತಿದ್ದಾರೆ.

ಜಾನ್​ ಹೈ ತೋ ಜಹಾನ್ ಹೈ... PM-CARES ನಿಧಿಗೆ 25 ಕೋಟಿ ರೂ. ದೇಣಿಗೆ ನೀಡಿದ ಅಕ್ಕಿ​

ಟೀಂ ಇಂಡಿಯಾ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​ ಸುರೇಶ್​ ರೈನಾ ನಮೋ ಮನವಿಗೆ ಸ್ಪಂದಿಸಿದ್ದು, 31 ಲಕ್ಷ ರೂ PM-CARES ನಿಧಿಗೆ ಹಾಗೂ 21 ಲಕ್ಷ ರೂ ಉತ್ತರಪ್ರದೇಶ ಮುಖ್ಯಮಂತ್ರಿ ವಿಪತ್ತು ನಿರ್ವಹಣಾ ನಿಧಿಗೆ ದೇಣಿಗೆ ನೀಡಿದ್ದಾರೆ. ಇದೇ ವೇಳೆ, ನಿಮ್ಮ ಕೈಯಿಂದ ಆದಷ್ಟು ಸಹಾಯ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಮನವಿಗೆ ಸ್ಪಂದಿಸಿರುವ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ 25 ಕೋಟಿ ರೂ. ನೆರವು ನೀಡಿದ್ದಾರೆ.

ABOUT THE AUTHOR

...view details