ಶಾರ್ಜಾ:ವುಮೆನ್ಸ್ ಟಿ20 ಚಾಲೆಂಜ್ನ 3ನೇ ಪಂದ್ಯದಲ್ಲಿ ಟ್ರೈಲ್ಬ್ಲೇಜರ್ಸ್ ವಿರುದ್ಧ ಟಾಸ್ ಗೆದ್ದ ಸೂಪರ್ ನೋವಾಸ್ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಉದ್ಘಾಟನಾ ಪಂದ್ಯದಲ್ಲಿ ವೆಲಾಸಿಟಿ ವಿರುದ್ಧ ರೋಚಕ ಸೋಲುಕಂಡಿದ್ದ ಸೂಪರ್ ನೋವಾಸ್ ಫೈನಲ್ ಪ್ರವೇಶಿಸಬೇಕಾದರೆ ಈ ಪಂದ್ಯವನ್ನು ಗೆಲ್ಲಲೇ ಬೇಕಿದೆ. ವೆಲಾಸಿಟಿ ಟ್ರೈಲ್ ಬ್ಲೇಜರ್ಸ್ ವಿರುದ್ಧ ಹೀನಾಯ ಸೋಲು ಕಂಡಿರುವುದರಿಂದ ಈ ಪಂದ್ಯದಲ್ಲಿ ಸೂಪರ್ ನೋವಾಸ್ ಗೆದ್ದರೆ ರನ್ರೇಟ್ ಆಧಾರದ ಮೇಲೆ ಫೈನಲ್ ಪ್ರವೇಶಿಸಲಿದೆ.