ಕರ್ನಾಟಕ

karnataka

ETV Bharat / sports

'ಬೆಂಗಳೂರು ನೀರಿನ ಪ್ರಭಾವ': ರಾಹುಲ್ ಯಶಸ್ಸಿನ ಗುಟ್ಟು ರಟ್ಟು ಮಾಡಿದ ಗವಾಸ್ಕರ್!! - ರಾಹುಲ್ ದ್ರಾವಿಡ್

ಸತತ ಸೋಲಿನಿಂದ ಕಂಗೆಟ್ಟಿದ್ದ ಪಂಜಾಬ್ ನಂತರ ಟಾಪ್​ ಮೂರು ತಂಡಗಳನ್ನೇ ಬಗ್ಗು ಬಡಿದು ಪ್ಲೇ ಆಫ್​​ ರೇಸ್​ಗೆ ಮರಳಿದೆ. ಡೆಲ್ಲಿ ವಿರುದ್ಧದ ಪಂದ್ಯದ ನಂತರ ಮಾತನಾಡಿರುವ ಗವಾಸ್ಕರ್​ ರಾಹುಲ್ ಯಶಸ್ಸಿನ ಗುಟ್ಟನ್ನು ಬಹಿರಂಗಪಡಿಸಿದ್ದಾರೆ.

ಕೆಎಲ್ ರಾಹುಲ್
ಕೆಎಲ್ ರಾಹುಲ್

By

Published : Oct 22, 2020, 8:33 PM IST

ಮುಂಬೈ:ಕಿಂಗ್ಸ್​ ಇಲೆವೆನ್ ಪಂಜಾಬ್ ತಂಡದ ನಾಯಕ ಹಾಗೂ ಕನ್ನಡಿಗ ಕೆಎಲ್ ರಾಹುಲ್ ಅವರು ಬ್ಯಾಟಿಂಗ್ ಪ್ರದರ್ಶನ ಮತ್ತು ತಂಡವನ್ನು ಮುಂದೆ ನಿಂತು ಮುನ್ನಡೆಸುತ್ತಿರುವುದನ್ನ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್​ ಮೆಚ್ಚಿಕೊಂಡಿದ್ದಾರೆ. ರಾಹುಲ್​ ಸಾಧನೆಗೆ ಕಾರಣ ನೀಡಿರುವ ಅವರು, ಬೆಳೆದು ಬಂದಿರುವುದು ಬೆಂಗಳೂರು ನೀರು ಕುಡಿದು ಎಂದು ಮನಸಾರೆ ಕೊಂಡಾಡಿದ್ದಾರೆ.

ರಾಹುಲ್ 2020ರ ಆವೃತ್ತಿಯಲ್ಲಿ ಕಿಂಗ್ಸ್ ಇಲೆವೆನ್ ನಾಯಕರಾಗಿದ್ದಾರೆ. ಜೊತೆಗೆ ಆರಂಭಿಕ ಬ್ಯಾಟ್ಸ್​ಮನ್​ ಆಗಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿರುವ ರಾಹುಲ್ ಗರಿಷ್ಠ ರನ್ ​ಸ್ಕೋರರ್​ ಆಗಿ ಆರೆಂಜ್ ಕ್ಯಾಪ್​ ಅನ್ನು ತಮ್ಮಲ್ಲೇ ಉಳಿಸಿಕೊಂಡು ಬರುತ್ತಿದ್ದಾರೆ. ಇವರ ನೇತೃತ್ವದಲ್ಲಿ ಪಂಜಾಬ್ ತಂಡ ಆಡಿರುವ 10 ಪಂದ್ಯಗಳಲ್ಲಿ 4 ಗೆಲುವು ಹಾಗೂ 6 ಸೋಲುಗಳೊಡನೆ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ.

ಸತತ ಸೋಲಿನಿಂದ ಕಂಗೆಟ್ಟಿದ್ದ ಪಂಜಾಬ್ ನಂತರ ಟಾಪ್​ ಮೂರು ತಂಡಗಳನ್ನೇ ಬಗ್ಗುಬಡಿದು ಪ್ಲೇ ಆಫ್​​ ರೇಸ್​ಗೆ ಮರಳಿದೆ. ಡೆಲ್ಲಿ ವಿರುದ್ಧದ ಪಂದ್ಯದ ನಂತರ ಮಾತನಾಡಿರುವ ಗವಾಸ್ಕರ್​, ರಾಹುಲ್ ಯಶಸ್ಸಿನ ಗುಟ್ಟನ್ನು ಬಹಿರಂಗಪಡಿಸಿದ್ದಾರೆ.

ಕೆಎಲ್ ರಾಹುಲ್

" ಅದು ಬೆಂಗಳೂರು ನೀರಿನ ಪ್ರಭಾವ. ಕೇವಲ ಕ್ರಿಕೆಟ್​ನಲ್ಲಿ ಮಾತ್ರವಲ್ಲ. ಎಲ್ಲ ರೀತಿಯ ಕ್ರೀಡೆಯಲ್ಲೂ ಬೆಂಗಳೂರು ಹಲವಾರು ವಿಶ್ವ ದರ್ಜೆಯ ಕ್ರೀಡಾಪಟುಗಳನ್ನು ತಯಾರು ಮಾಡಿದೆ. ಪ್ರಕಾಶ್ ಪಡುಕೋಣೆ ನನ್ನ ಸಾರ್ವಕಾಲಿಕ ನೆಚ್ಚಿನ ಕ್ರೀಡಾಪಟು. ಗುಂಡಪ್ಪ ವಿಶ್ವನಾಥ್, ಎರಪಳ್ಳಿ ಪ್ರಸನ್ನ, ಕುಂಬ್ಳೆ, ರಾಹುಲ್ ದ್ರಾವಿಡ್​ ಸೇರಿದಂತೆ ಬೆಂಗಳೂರು ಹಲವು ವಿಶ್ವದರ್ಜೆಯ ಅಥ್ಲೀಟ್​ಗಳನ್ನು ನೀಡಿದೆ. ಹಾಗಾಗಿ ರಾಹುಲ್​ ಪ್ರದರ್ಶನಕ್ಕೆ ಬಹುಶಃ ಬೆಂಗಳೂರು ನೀರು ಕಾರಣ" ಎಂದು ಭಾರತ ಕಂಡ ಶ್ರೇಷ್ಠ ಕ್ರಿಕೆಟಿಗ ಗವಾಸ್ಕರ್ ಹೇಳಿದ್ದಾರೆ.

13ನೇ ಆವೃತ್ತಿಯಲ್ಲಿ ರಾಹುಲ್ 10 ಪಂದ್ಯಗಳಿಂದ 5 ಅರ್ಧಶತಕ ಹಾಗೂ ಒಂದು ಶತಕದ ನೆರವಿನೊಂದಿಗೆ 525 ರನ್​ಗಳಿಸಿದ್ದಾರೆ.

ABOUT THE AUTHOR

...view details