ಕರ್ನಾಟಕ

karnataka

ETV Bharat / sports

ಐಪಿಎಲ್​ನಲ್ಲಿ 'ಸಾಫ್ಟ್​ ಸಿಗ್ನಲ್​' ನಿಯಮ ರದ್ಧತಿಗೆ ನಿರ್ಧಾರ: ಗವಾಸ್ಕರ್​ ಸಂತಸ - ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್

ವಿವಾದಕ್ಕೆ ಕಾರಣವಾಗಿದ್ದ ಸಾಫ್ಟ್‌ ಸಿಗ್ನಲ್‌ ನಿಯಮವನ್ನು ತೆಗೆದುಹಾಕುವ ನಿರ್ಧಾರಕ್ಕೆ ಭಾರತದ ಮಾಜಿ ಕ್ರಿಕೆಟ್​ ಆಟಗಾರ ಸುನಿಲ್ ಗವಾಸ್ಕರ್ ಸಂತಸ ವ್ಯಕ್ತಪಡಿಸಿದ್ದಾರೆ.

Sunil Gavaskar
ಸುನಿಲ್ ಗವಾಸ್ಕರ್

By

Published : Mar 30, 2021, 12:41 PM IST

ಹೈದರಾಬಾದ್:ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯಿಂದ ಸಾಫ್ಟ್‌ ಸಿಗ್ನಲ್‌ ನಿಯಮವನ್ನು ತೆಗೆದುಹಾಕುವ ನಿರ್ಧಾರಕ್ಕೆ ಭಾರತದ ಮಾಜಿ ಶ್ರೇಷ್ಠ ಕ್ರಿಕೆಟ್​ ಆಟಗಾರ ಸುನಿಲ್ ಗವಾಸ್ಕರ್ ಕ್ರಿಕೆಟ್ ನಿಯಂತ್ರಣ ಮಂಡಳಿವನ್ನು ಶ್ಲಾಘಿಸಿದ್ದಾರೆ.

ದೇಶೀಯ ಮಟ್ಟದಲ್ಲಿ ಸಾಫ್ಟ್​ ಸಿಗ್ನಲ್​ ಇಲ್ಲದೇ ಆಟ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನೋಡಲು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ)ಗೆ ಮನವಿ ಮಾಡಬೇಕು ಎಂದು ಭಾರತದ ಮಾಜಿ ನಾಯಕ ಹೇಳಿದ್ದಾರೆ. "ಬಹುಶಃ ಅದು ಕಾರ್ಯರೂಪಕ್ಕೆ ಬಂದರೆ, ಅದನ್ನು ಶಾಶ್ವತ ಪಂದ್ಯವನ್ನಾಗಿ ಮಾಡಬಹುದು" ಎಂದು ಗವಾಸ್ಕರ್ ಹೇಳಿದರು.

ಈ ಹಿಂದೆ, ಟೀಂ ಇಂಡಿಯಾ ನಾಯಕ ಕೊಹ್ಲಿಯೂ ಸಹ ಈ ನಿಯಮಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಈ ನಿರ್ಧಾರಗಳು ಆಟದ ಹಾದಿಯನ್ನು ಬದಲಾಯಿಸಬಹುದು. ವಿಶೇಷವಾಗಿ ದೊಡ್ಡ ಆಟಗಳಲ್ಲಿ ಎಂದು ಹೇಳಿದ್ದರು.

ಭಾರತ ಮತ್ತು ಇಂಗ್ಲೆಂಡ್‌ ನಡುವಿನ 4ನೇ ಟಿ-20 ಪಂದ್ಯದಲ್ಲಿ ಸಾಫ್ಟ್​ ಸಿಗ್ನಲ್​ ನಿಯಮದಿಂದಾಗಿ ಸೂರ್ಯಕುಮಾರ್‌ ಯಾದವ್‌ ಔಟಾಗಿದ್ದು, ವಿವಾದಕ್ಕೆ ಕಾರಣವಾಗಿತ್ತು. ಇದಾದ ಬಳಿಕ ಕ್ರಿಕೆಟ್‌ ವಲಯದಲ್ಲಿ ಈ ನಿಯಮ ಚರ್ಚೆಗೆ ಗ್ರಾಸವಾಗಿತ್ತು.

ಏನಿದು ಸಾಫ್ಟ್‌ ಸಿಗ್ನಲ್‌:ಪಂದ್ಯದ ವೇಳೆ ಅನುಮಾನಾಸ್ಪದ ರನ್‌ ಅಥವಾ ಕ್ಯಾಚ್‌ ವಿಚಾರವಾಗಿ ಅಂಪೈರ್‌ಗೆ ನಿರ್ಣಯ ಪ್ರಕಟಿಸಲು ಸಾಧ್ಯವಾಗದೇ ಇದ್ದಾಗ ಟಿವಿ ಅಂಪೈರ್‌ ಸಹಾಯ ಕೇಳಲಾಗುತ್ತದೆ. ಈ ವೇಳೆ, ಟೀವಿ ಅಂಪೈರ್‌ ಮೈದಾನದಲ್ಲಿರುವ ಅಂಪೈರ್‌ ನಿರ್ಧಾರವನ್ನು ಪರಿಗಣಿಸಿ ಅಂತಿಮ ನಿರ್ಣಯ ಪ್ರಕಟಿಸಲಾಗುತ್ತದೆ. ಇದನ್ನು ಸಾಫ್ಟ್‌ ಸಿಗ್ನಲ್‌ ಎನ್ನಲಾಗುತ್ತದೆ. ಈ ಹಂತದಲ್ಲಿ ಒಂದೊಮ್ಮೆ ಟಿವಿ ಅಂಪೈರ್‌ಗೂ ನಿರ್ಣಯ ನೀಡಲು ಸಾಧ್ಯವಾಗದೇ ಇದ್ದಾಗ ಮೈದಾನದಲ್ಲಿರುವ ಅಂಪೈರ್‌ ನೀಡಿರುವ ನಿರ್ಣಯವನ್ನೇ ಎತ್ತಿಹಿಡಿಯುತ್ತದೆ.

ABOUT THE AUTHOR

...view details