ನವದೆಹಲಿ: ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿಯ ನೆಟ್ಫ್ಲಿಕ್ಸ್ ಐಡಿ - ಪಾಸ್ವರ್ಡ್ ಕೇಳಿದ್ದ ಅಭಿಮಾನಿಗೆ ಎರಡು ತಿಂಗಳು ಉಚಿತ ನೆಟ್ಫ್ಲಿಕ್ಸ್ ಸೇವೆ ಹಾಗೂ ಸಹಿ ಮಾಡಿದ ಜರ್ಸಿಯನ್ನು ನೀಡುವ ಮೂಲಕ ಉದಾರತೆ ಮೆರೆದಿದ್ದಾರೆ.
ನಿನ್ನೆಯಷ್ಟೇ ಅಭಿಮಾನಿಯೊಬ್ಬ ಚೆಟ್ರಿ ಫೇಸ್ಬುಕ್ ಇನ್ಸ್ಬಾಕ್ಸ್ಗೆ ‘ಚೆಟ್ರಿ ಬಾಯ್ ನಿಮ್ಮ ನೆಟ್ಫ್ಲಿಕ್ಸ್ ಐಡಿ - ಪಾಸ್ವರ್ಡ್ ನೀಡಿ , ಲಾಕ್ಡೌನ್ ನಂತರ ಬೇಕಾದರೆ ಬದಲಿಸಿಕೊಳ್ಳಿ,’ ಎಂದು ಸಂದೇಶ ಕಳುಹಿಸಿದ್ದ.
ಈ ವಿಚಾರವನ್ನು ಚೆಟ್ರಿ ತಮ್ಮ ಟ್ವಿಟರ್ನಲ್ಲಿ , ಜರ್ಸಿ ,ಫೋಟೋ ಮೇಲೆ ಆಟೋಗ್ರಾಫ್, ಪೋಸ್ಟ್ಗಳಿಗೆ ರಿಪ್ಲೇ ಹಾಗೂ ಪಕ್ಕದ ಮನೆಯವರ ಮಗನ ನಾಯಿ ಮರಿಗೆ ವಿಡಿಯೋ ಮೂಲಕ ವಿಶ್ ಮಾಡಿ ಎಂಬಿತ್ಯಾದಿ ಕೋರಿಕೆ ಇಲ್ಲ, ಬದಲಾಗಿ ತಮ್ಮ ಆದ್ಯತೆಯನ್ನು ನೇರವಾಗಿ ಇಲ್ಲೊಬ್ಬರು ಕೇಳಿದ್ದಾರೆ. ಅದನ್ನು ನಾನು ಬೇಡಿಕೆ ಎಂದು ಸ್ವೀಕರಿಸಿದ್ದೇನೆ ಎಂದು ಟ್ವೀಟ್ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ನೆಟ್ಫ್ಲಿಕ್ಸ್ ಇಂಡಿಯಾ, ನಾವು ಇದೀಗ ಚರ್ಚೆಯಲ್ಲಿದ್ದೇವೆ, "ಈ ಸಂದರ್ಭದಲ್ಲಿ ನಾವು ಕೂಡ ನಿಮ್ಮ ಫೋಟೋ ಮೇಲೆ ನಿಮ್ಮ ಆಟೋಗ್ರಾಫ್ ಪಡೆಯಬಹುದೇ ?" ಎಂದು ಟ್ವೀಟ್ ಮಾಡಿದ್ದರು.