ಕರ್ನಾಟಕ

karnataka

ETV Bharat / sports

ಐಸಿಸಿ ಟೆಸ್ಟ್​ ರ‍್ಯಾಂಕಿಂಗ್​: 2ನೇ ಸ್ಥಾನಕ್ಕೇರಿದ ಸ್ಟುವರ್ಟ್​ ಬ್ರಾಡ್​, 5ನೇ ಸ್ಥಾನಕ್ಕೆ ಬಡ್ತಿಪಡೆದ ಬಾಬರ್​ ಅಜಮ್​ - ಜಸ್ಪ್ರೀತ್ ಬುಮ್ರಾ

2ನೇ ಟೆಸ್ಟ್​ ಪಂದ್ಯದಲ್ಲಿ 56 ಕ್ಕೆ 4 ವಿಕೆಟ್​ ಪಡೆದಿದ್ದ ಸ್ಟುವರ್ಟ್​ ಬ್ರಾಡ್​ ರ‍್ಯಾಂಕಿಂಗ್​ನಲ್ಲಿ ಒಂದು ಸ್ಥಾನ ಏರಿಕೆ ಕಂಡಿದ್ದಾರೆ. 60ಕ್ಕೆ 3 ವಿಕೆಟ್​ ಪಡೆದಿದ್ದ ಜೇಮ್ಸ್​ ಆ್ಯಂಡರ್ಸನ್​ 16ರಿಂದ 14ನೇ ಸ್ಥಾನಕ್ಕೇರಿದ್ದಾರೆ.

ಐಸಿಸಿ ಟೆಸ್ಟ್​ ರ‍್ಯಾಂಕಿಂಗ್
ಐಸಿಸಿ ಟೆಸ್ಟ್​ ರ‍್ಯಾಂಕಿಂಗ್

By

Published : Aug 18, 2020, 6:07 PM IST

ಸೌತಾಂಪ್ಟನ್​: ಪಾಕಿಸ್ತಾನದ ವಿರುದ್ಧ 2ನೇ ಟೆಸ್ಟ್​ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ ಸ್ಟುವರ್ಟ್​ ಬ್ರಾಡ್​ ಹಾಗೂ ಜೇಮ್ಸ್​ ಆ್ಯಂಡರ್ಸನ್​ ನೂತನ ಐಸಿಸಿ ಟೆಸ್ಟ್​ ಬೌಲರ್​ ರ‍್ಯಾಂಕಿಂಗ್​ನಲ್ಲಿ ಬಡ್ತಿ ಪಡೆದಿದ್ದಾರೆ.

2ನೇ ಟೆಸ್ಟ್​ ಪಂದ್ಯದಲ್ಲಿ 56 ಕ್ಕೆ 4 ವಿಕೆಟ್​ ಪಡೆದಿದ್ದ ಸ್ಟುವರ್ಟ್​ ಬ್ರಾಡ್​ ರ‍್ಯಾಂಕಿಂಗ್​ನಲ್ಲಿ ಒಂದು ಸ್ಥಾನ ಏರಿಕೆ ಕಂಡಿದ್ದಾರೆ. 60ಕ್ಕೆ 3 ವಿಕೆಟ್​ ಪಡೆದಿದ್ದ ಜೇಮ್ಸ್​ ಆ್ಯಂಡರ್ಸನ್​ 16ರಿಂದ 14ನೇ ಸ್ಥಾನಕ್ಕೇರಿದ್ದಾರೆ. ಪಾಕಿಸ್ತಾನದ ಮೊಹಮ್ಮದ್​ ಅಬ್ಬಾಸ್​ 10ರಿಂದ 8 ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ಭಾರತದ ಜಸ್ಪ್ರೀತ್​ ಬುಮ್ರಾ 9ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಇನ್ನು ಬ್ಯಾಟಿಂಗ್​ ರ‍್ಯಾಂಕಿಂಗ್​ನಲ್ಲಿ ಪಾಕಿಸ್ತಾನದ ಸ್ಟಾರ್​ ಬ್ಯಾಟ್ಸ್​ಮನ್​ ಬಾಬರ್​ ಅಜಮ್​ ಮತ್ತೆ ತಮ್ಮ ಕೆರಿಯರ್​ ಬೆಸ್ಟ್​ 5ನೇ ಸ್ಥಾನಕ್ಕೆ ಮರಳಿದ್ದಾರೆ. ಅರ್ಧಶತಕ ಸಿಡಿಸಿದ ಅಬಿದ್​ ಅಲಿ 49 ಹಾಗೂ ಮೊಹಮ್ಮದ್​ ರಿಜ್ವಾನ್​ 75ನೇ ಸ್ಥಾನ ಪಡೆದಿದ್ದಾರೆ.

ಜೋ ರೂಟ್ 9ನೇ ಸ್ಥಾನ​ ಹಾಗೂ ಬೆನ್​ಸ್ಟೋಕ್ಸ್​ 7 ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಸ್ವಿವ್​ ಸ್ಮಿತ್​ ಹಾಗೂ ವಿರಾಟ್​ ಕೊಹ್ಲಿ ಮೊದಲೆರಡು ಸ್ಥಾನದಲ್ಲಿ ಮುಂದುವರಿದಿದ್ದಾರೆ.

ಜೇಮ್ಸ್​ ಆ್ಯಂಡರ್ಸನ್​

ಈ ಪಂದ್ಯದಲ್ಲಿ ಡ್ರಾನಲ್ಲಿ ಅಂತ್ಯಗೊಂಡಿದ್ದರಿಂದ 279 ಅಂಕಗಳೊಂದಿಗೆ 3ನೇ ಸ್ಥಾನ ಹಾಗೂ ಪಾಕಿಸ್ತಾನ 153 ಅಂಕಗಳೊಂದಿಗೆ 5ನೇ ಸ್ಥಾನ ಪಡೆದಿದೆ. ಭಾರತ (360)ಹಾಗೂ ಆಸ್ಟ್ರೇಲಿಯಾ(290) ಅಂಕಗಳೊಂದಿಗೆ ಮೊದಲೆರಡು ಸ್ಥಾನದಲ್ಲಿದೆ.

ABOUT THE AUTHOR

...view details