ನವದೆಹಲಿ: ಆಸ್ಟ್ರೇಲಿಯಾದ ಲೆಜೆಂಡರಿ ಬೌಲರ್ ಶೇನ್ ವಾರ್ನ್ ಟೆಸ್ಟ್ ಕ್ರಿಕೆಟ್ನಲ್ಲಿ 700 ವಿಕೆಟ್ ಪಡೆದ ಮೊದಲ ಬೌಲರ್ ಎನಿಸಿಕೊಂಡಿದ್ದರು. ಈ ಸಾಧನೆಯನ್ನು ಪ್ರಸ್ತುತ ಇಂಗ್ಲೆಂಡ್ ತಂಡದ ವೇಗಿ ಸ್ಟುವರ್ಟ್ ಬ್ರಾಡ್ ಮರುಕಳಿಸಲಿದ್ದಾರೆ ಎಂದು ವಾರ್ನ್ ಭವಿಷ್ಯ ನುಡಿದರು.
ಪ್ರವಾಸಿ ವಿಂಡೀಸ್ ತಂಡದ ವಿರುದ್ಧದ ಕೊನೆಯ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ಕ್ರೈಗ್ ಬ್ರಾತ್ವೇಟ್ ವಿಕೆಟ್ ಪಡೆಯುವ ಮೂಲಕ ಬ್ರಾಡ್ ಟೆಸ್ಟ್ ಕ್ರಿಕೆಟ್ನಲ್ಲಿ 500 ವಿಕೆಟ್ ಪಡೆದ ಸಾಧನೆ ಮಾಡಿದ್ದರು. ಈ ಮೂಲಕ ಈ ಸಾಧನೆ ಮಾಡಿದ ವಿಶ್ವದ 7ನೇ ಹಾಗೂ ಇಂಗ್ಲೆಂಡ್ನ 2ನೇ ಬೌಲರ್ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದರು.
ಈ ವೇಳೆ, '500 ನೇ ವಿಕೆಟ್ ಪಡೆದ ಪಂದ್ಯದಲ್ಲಿ ಗೆಲುವು ಸಾಧಿಸಿರುವುದು ವಿಶೇಷ. ಈ ಸಂದರ್ಭದಲ್ಲಿ ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದ. ನಾನು ಕ್ರಿಕೆಟ್ ಜೀವನವನ್ನು ಪ್ರೀತಿಸುತ್ತೇನೆ' ಎಂದು ಬ್ರಾಡ್ ಟ್ವೀಟ್ ಮಾಡಿದ್ದರು.