ಮ್ಯಾಂಚೆಸ್ಟರ್:ವೆಸ್ಟ್ ಇಂಡೀಸ್ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದ ಅಂತಿಮ ದಿನ ಕ್ರೈಗ್ ಬ್ರಾತ್ವೇಟ್ ವಿಕೆಟ್ ಪಡೆಯುವ ಮೂಲಕ ಇಂಗ್ಲೆಂಡ್ ತಂಡದ ಹಿರಿಯ ವೇಗಿ ಸ್ಟುವರ್ಟ್ ಬ್ರಾಡ್ ಟೆಸ್ಟ್ ಕ್ರಿಕೆಟ್ನಲ್ಲಿ 500 ವಿಕೆಟ್ ಸಾಧನೆ ಮಾಡಿದರು.
ಸ್ಟುವರ್ಟ್ ಬ್ರಾಡ್ 500 ವಿಕೆಟ್ ಸಾಧನೆ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಈ ಮಹತ್ತರ ದಾಖಲೆ ಬರೆದ 7ನೇ ಬೌಲರ್ ಹಾಗೂ ವಿಶ್ವದ 4ನೇ ವೇಗದ ಬೌಲರ್ ಹಾಗೂ ಇಂಗ್ಲೆಂಡ್ನ 2ನೇ ಬೌಲರ್ ಎನಿಸಿಕೊಂಡಿದ್ದಾರೆ. ಬ್ರಾಡ್ಗಿಂತ ಮೊದಲು ಇಂಗ್ಲೆಂಡ್ ಹಿರಿಯ ವೇಗಿ ಜೇಮ್ಸ್ ಆ್ಯಂಡರ್ಸನ್ (589) ಈ ಮೈಲಿಗಲ್ಲನ್ನು ದಾಟಿದ್ದರು.