ಕರ್ನಾಟಕ

karnataka

ETV Bharat / sports

IND vs ENG: ಎರಡನೇ ಬಾರಿ ತಪ್ಪು ಮಾಡಿದ ಬೆನ್​ಸ್ಟೋಕ್ಸ್​, ಅಂಪೈರ್​​ಗಳ ಎಚ್ಚರಿಕೆ

ಮಹಾರಾಷ್ಟ್ರ ಕ್ರಿಕೆಟ್​​​ ಸಂಸ್ಥೆಯ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಏಕದಿನ ಪಂದ್ಯ ನಡೆಯುತ್ತಿದ್ದು, ಇಂಗ್ಲೆಂಡ್ ಆಟಗಾರ ಬೆನ್​​ ಸ್ಟೋಕ್ಸ್​ಗೆ ಅಂಪೈರ್​ಗಳು ವಾರ್ನಿಂಗ್‌ ನೀಡಿದ್ದಾರೆ.

Stokes uses saliva on ball, gets warning from on-field umpires
ಬೆನ್​ಸ್ಟೋಕ್ಸ್

By

Published : Mar 26, 2021, 3:28 PM IST

ಪುಣೆ, ಮಹಾರಾಷ್ಟ್ರ:ಭಾರತ- ಇಂಗ್ಲೆಂಡ್​ ನಡುವಿನ ಎರಡನೇ ಏಕದಿನ ಪಂದ್ಯ ನಡೆಯುತ್ತಿದ್ದು, ಇಂಗ್ಲೆಂಡ್​ ತಂಡದ ಆಲ್​ರೌಂಡರ್​ ಬೆನ್​ ಸ್ಟೋಕ್ಸ್​​ಗೆ ಕೋವಿಡ್ ಮಾರ್ಗಸೂಚಿ ನಿಯಮ ಉಲ್ಲಂಘನೆ ಸಂಬಂಧ ಎರಡನೇ ಬಾರಿ ಅಂಪೈರ್​ಗಳು ಎಚ್ಚರಿಕೆಯ ಕರೆಗಂಟೆ ಬಾರಿಸಿದರು.

ಬೌಲಿಂಗ್ ಮಾಡುವ ವೇಳೆ ಬೆನ್​ ಸ್ಟೋಕ್ಸ್​ ಚೆಂಡಿಗೆ ಎಂಜಲು (ಸಲೈವಾ) ಹಚ್ಚಿದ್ದಾರೆ. ಇದನ್ನು ಅಂಪೈರ್​ಗಳಾದ ನಿತಿನ್ ಮೆನನ್ ಮತ್ತು ವಿರೇಂದರ್ ಶರ್ಮಾ ಇಂಗ್ಲೆಂಡ್ ನಾಯಕ ಜಾಸ್ ಬಟ್ಲರ್​ ಗಮನಕ್ಕೆ ತಂದಿದ್ದಾರೆ.

ಇದನ್ನೂ ಓದಿ:ಅರ್ಚಕರ ಕ್ರಿಕೆಟ್; ಪಂಚೆ ಕಟ್ಟಿ ಬ್ಯಾಟ್​ ಹಿಡಿದ ಪೂಜಾರಿಗಳು! ವಿಡಿಯೋ...

ಚೆಂಡಿಗೆ ಎಂಜಲು ಹಚ್ಚುವುದನ್ನು ಕೋವಿಡ್ ನಂತರದಲ್ಲಿ ಐಸಿಸಿ ಬ್ಯಾನ್ ಮಾಡಿತ್ತು. ಕೋವಿಡ್ ಮಾರ್ಗಸೂಚಿಗಳಂತೆ ಆಟಕ್ಕೂ ಮೊದಲು ಚೆಂಡಿಗೆ ಸ್ಯಾನಿಟೈಸ್ ಮಾಡಲಾಗುತ್ತದೆ. ಆದರೆ ಇದನ್ನು ಮರೆತು ಸ್ಟೋಕ್ಸ್​ ಚೆಂಡಿಗೆ ಎಂಜಲು ಹಚ್ಚಿದ್ದರು.

ಭಾರತದ ವಿರುದ್ಧ ಇಂಗ್ಲೆಂಡ್ ಸರಣಿಯಲ್ಲಿ ಇದು ಎರಡನೇ ಬಾರಿ ಬೆನ್​ ಸ್ಟೋಕ್ಸ್​ಗೆ ಎಚ್ಚರಿಕೆ ನೀಡಲಾಗಿದೆ. ಇದಕ್ಕೂ ಮೊದಲು ಹಿಂದಿನ ತಿಂಗಳು ಅಹಮದಾಬಾದ್​ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿಯೂ ಇದೇ ರೀತಿ ಚೆಂಡಿಗೆ ಎಂಜಲು ಹಚ್ಚಿ ಅಂಪೈರ್​ಗಳು ಎಚ್ಚರಿಕೆ ನೀಡಿದ್ದರು.

ABOUT THE AUTHOR

...view details