ಮ್ಯಾಂಚೆಸ್ಟರ್:ಇಂಗ್ಲೆಂಡ್ - ವೆಸ್ಟ್ ಇಂಡೀಸ್ ನಡುವಿನ ಕೊನೆಯ ಸರಣಿ ಪಂದ್ಯ ಇಂದು ನಡೆಯಲಿದೆ. ಇನ್ನು ಈ ಪಂದ್ಯದಲ್ಲಿ ಬೆನ್ ಸ್ಟೋಕ್ಸ್ ಬೌಲಿಂಗ್ ಮಾಡುವುದಿಲ್ಲ ಎಂಬ ಅನುಮಾನ ವ್ಯಕ್ತವಾಗಿದೆ. ಈ ಕುರಿತು ತಂಡದ ನಾಯಕ ಜೋ ರೂಟ್ ಸುಳಿವು ನೀಡಿದ್ದಾರೆ.
ಕೊನೆಯ ಸರಣಿ ಪಂದ್ಯದಲ್ಲಿ ಬೆನ್ ಸ್ಟೋಕ್ಸ್ ಬೌಲಿಂಗ್ ಡೌಟು: ಸುಳಿವು ನೀಡಿದ ರೂಟ್ - ಜೋ ರೂಟ್
ಇಂಗ್ಲೆಂಡ್ - ವೆಸ್ಟ್ ಇಂಡೀಸ್ ನಡುವಿನ ಕೊನೆಯ ಸರಣಿ ಪಂದ್ಯದಲ್ಲಿ ಬೆನ್ ಸ್ಟೋಕ್ಸ್ ಬೌಲಿಂಗ್ ಮಾಡುವುದಿಲ್ಲ ಎಂಬ ಅನುಮಾನ ವ್ಯಕ್ತವಾಗಿದೆ.
![ಕೊನೆಯ ಸರಣಿ ಪಂದ್ಯದಲ್ಲಿ ಬೆನ್ ಸ್ಟೋಕ್ಸ್ ಬೌಲಿಂಗ್ ಡೌಟು: ಸುಳಿವು ನೀಡಿದ ರೂಟ್ ಸುಳಿವು ನೀಡಿದ ರೂಟ್](https://etvbharatimages.akamaized.net/etvbharat/prod-images/768-512-8150666-thumbnail-3x2-mng.jpg)
ಸುಳಿವು ನೀಡಿದ ರೂಟ್
ಈಗಾಗಲೇ ಉಭಯ ತಂಡಗಳು 1-1 ರಿಂದ ಸಮಬಲ ಸಾಧಿಸಿವೆ. ಅಷ್ಟೇ ಅಲ್ಲದೆ, ಈ ಹಿಂದೆ 32 ವರ್ಷಗಳ ಬಳಿಕ ಇಂಗ್ಲೆಂಡ್ ನೆಲದಲ್ಲಿ ವೆಸ್ಟ್ ಇಂಡೀಸ್ ತಂಡ ಜಯ ಗಳಿಸಿತ್ತು. ಇದೀಗ ಸರಣಿ ವಶಪಡಿಸಿಕೊಳ್ಳಲು ಸಜ್ಜಾಗಿದೆ. ಆದರೆ ಈ ಪಂದ್ಯದಲ್ಲಿ ಇಂಗ್ಲೆಂಡ್ ಪರವಾಗಿ ಬೆನ್ ಸ್ಟೋಕ್ಸ್ ಬೌಲಿಂಗ್ ಮಾಡುವುದಿಲ್ಲ ಎಂಬ ಮಾತು ಕೇಳಿ ಬಂದಿದೆ.
"ಬ್ಯಾಟಿಂಗ್ ಮಾಡಲು ಸ್ಟೋಕ್ಸ್ ಉತ್ತಮರಾಗಿದ್ದಾರೆ. ಆದರೆ ಬೌಲಿಂಗ್ನಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಆಡಬೇಕು. ಒಂದುವೇಳೆ ಅವರು ಬೌಲಿಂಗ್ ಮಾಡಲು ಸಾಧ್ಯವಾಗದಿದ್ದರೆ, ನಾವು ಸ್ವಲ್ಪ ಬದಲಾವಣೆಯನ್ನು ಮಾಡುತ್ತೇವೆ" ಎಂದು ರೂಟ್ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.