ಮೆಲ್ಬೋರ್ನ್: ಭಾರತ ತಂಡದ ಹಂಗಾಮಿ ನಾಯಕ ಅಜಿಂಕ್ಯಾ ರಹಾನೆ ಆಸೀಸ್ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ನಲ್ಲಿ ಆಕರ್ಷಕ ಶತಕ ಸಿಡಿಸಿದ್ದಾರೆ. ಆದರೆ ಟೀಂ ಇಂಡಿಯಾ ನಾಯಕ ಲಾರ್ಡ್ಸ್ನಲ್ಲಿ ಸಿಡಿಸಿದ ಸೆಂಚುರಿಯೇ ತಮ್ಮ ಅತ್ಯುತ್ತಮ ಶತಕವಾಗಿದೆ ಎಂದಿದ್ದಾರೆ.
ರಹಾನೆ ಈ ಪಂದ್ಯದಲ್ಲಿ 112 ರನ್ ಗಳಿಸಿ ಔಟಾದರು. ಆದರೂ ಭಾರತ ತಂಡಕ್ಕೆ 131ರನ್ಗಳ ಮುನ್ನಡೆ ದೊರಕಿಸಿಕೊಡುವಲ್ಲಿ ಯಶಸ್ವಿಯಾದರು. ಇವರಿಗೆ ನೆರವು ನೀಡಿದ ಜಡೇಜಾ 57 ರನ್ ಗಳಿಸಿದರು.
"ಟೆಸ್ಟ್ ಕ್ರಿಕೆಟ್ನಲ್ಲಿ ಶತಕ ಸಿಡಿಸುವುದು ತುಂಬಾ ವಿಶೇಷವಾದದ್ದು. ಆದರೆ ಈ ಶತಕಕ್ಕಿಂತಲೂ ನನಗೆ ಈಗಲೂ ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ನಲ್ಲಿ(2014ರಲ್ಲಿ) ಸಿಡಿಸಿದ ಶತಕವೇ ಅತ್ಯುತ್ತಮವಾದದ್ದು ಎಂದು ಭಾವಿಸುತ್ತೇನೆ" ಎಂದು ರಹಾನೆ 3ನೇ ದಿನದಾಟದಂತ್ಯದ ನಂತರ ಮಾಧ್ಯಮದೊಂದಿಗೆ ಮಾತನಾಡುವ ವೇಳೆ ತಿಳಿಸಿದ್ದಾರೆ.
ಕ್ಯಾಪ್ಟನ್ ಕೂಲ್ಗೆ 'ದಶಕದ ಕ್ರೀಡಾ ಸ್ಫೂರ್ತಿ ಪ್ರಶಸ್ತಿ'
ಭಾರತ ತಂಡ 2014ರಲ್ಲಿ ಆಸ್ಟ್ರೆಲಿಯಾ ಪ್ರವಾಸ ಕೈಗೊಂಡಿದ್ದ ವೇಳೆ ಅಜಿಂಕ್ಯಾ ರಹಾನೆ ಮೊದಲ ಇನ್ನಿಂಗ್ಸ್ನಲ್ಲಿ ಒಂದೆಡೆ ವಿಕೆಟ್ ಬೀಳುತ್ತಿದ್ದರೂ ಏಕಾಂಗಿಯಾಗಿ ಹೋರಾಡಿ 154 ಎಸೆತಗಳಲ್ಲಿ 103 ರನ್ ಗಳಿಸಿದ್ದರು. ಈ ಪಂದ್ಯವನ್ನು ಭಾರತ ತಂಡ 95 ರನ್ಗಳಿಂದ ಜಯಿಸಿತ್ತು.
ಪಂದ್ಯದ ಬಗ್ಗೆ ಕೇಳಿದ್ದಕ್ಕೆ ಉತ್ತರಿಸಿದ ರಹಾನೆ, ನಾಯಕತ್ವವನ್ನು ಬೆಂಬಲಿಸುವ ಬದಲು ನಿಮ್ಮ ಮನಸಿನ ಭಾನೆಗಳನ್ನು ಬೆಂಬಲಿಸಬೇಕು. ಈ ಪಂದ್ಯದಲ್ಲಿ ಬೌಲರ್ಗಳಿಗೆ ಕ್ರೆಡಿಟ್ ಕೊಡಬೇಕು. ಅವರು ಉತ್ತಮವಾದ ಪ್ರದೇಶಗಳಲ್ಲಿ ಬೌಲಿಂಗ್ ಮಾಡಿದರು. ಆದರೆ ಈ ಪಂದ್ಯ ಇನ್ನೂ ಮುಗಿದಿಲ್ಲ, ನಾವು ಇನ್ನೂ 4 ವಿಕೆಟ್ ಪಡೆಯಬೇಕಿದೆ ಎಂದಿದ್ದಾರೆ.
ಪ್ರಸ್ತುತ ಆಸ್ಟ್ರೇಲಿಯಾ ತಂಡ 133 ರನ್ ಗಳಿಸಿ 6 ವಿಕೆಟ್ ಕಳೆದುಕೊಂಡಿದೆ. ಕ್ಯಾಮರೋನ್ ಗ್ರೀನ್(17) ಮತ್ತು ಪ್ಯಾಟ್ ಕಮ್ಮಿನ್ಸ್(15)ನೇ ನಾಳೆಗೆ ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ. ಆಸೀಸ್ ತಂಡ 2 ರನ್ಗಳ ಮುನ್ನಡೆ ಸಾಧಿಸಿದ್ದು, 4 ವಿಕೆಟ್ ಕೈಯಲ್ಲಿರುವುದರಿಂದ ಪೈಪೋಟಿಯುತ ರನ್ ಗಳಿಸುವುದೇ ಎಂಬುದನ್ನು ಕಾದು ನೋಡಬೇಕಿದೆ.