ಮುಂಬೈ: ಕೋವಿಡ್ 19 ರೋಗದ ಹಿನ್ನೆಲೆ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಭಾರತದ ವಿಶೇಷಚೇತನ ಕ್ರಿಕೆಟಿಗರಿಗೆ ನೆರವಾಗಲು ಆಸ್ಟ್ರೇಲಿಯಾದ ಮಾಜಿ ನಾಯುಕ ಸ್ಟೀವ್ ವಾ ಅವರ ಮ್ಯಾನೇಜರ್ ಹಾರ್ಲೆ ಮೆಡ್ಕಾಳ್ಟ್ ₹1.5 ಲಕ್ಷ ಸಂಗ್ರಹಿಸಿ ದೇಣಿಗೆ ನೀಡಿದ್ದಾರೆ.
ಕೋವಿಡ್-19 ಕಠಿಣ ಸಂದರ್ಭದಲ್ಲಿ ಭಾರತದ ವಿಶೇಷ ಚೇತನ ಕ್ರಿಕೆಟಿಗರಿಗೆ ಸಹಾಯ ಮಾಡಲು ಆಸೀಸ್ ವಿಶ್ವಚಾಂಪಿಯನ್ ಮಾಜಿ ನಾಯಕ ಸ್ಟಿವ್ ವಾ ಮ್ಯಾನೇಜರ್ ಮುಂದೆ ಬಂದಿದ್ದಾರೆ ಎಂದು ಫಿಸಿಕಲ್ ಚಾಲೆಂಜ್ಡ್ ಕ್ರಿಕೆಟ್ ಅಸೋಸಿಯೇಷನ್ ಆಫ್ ಇಂಡಿಯಾದ ಕಾರ್ಯದರ್ಶಿ ರವಿ ಚೌಹಾಣ್ ಬುಧವಾರ ತಿಳಿಸಿದ್ದಾರೆ. ಸುಮಾರು 30 ಅಂಗವಿಕಲ ಕ್ರಿಕೆಟ್ ಆಟಗಾರರಿಗೆ ತಲಾ ₹5000 ನೇರವಾಗಿ ಈ ನಿರ್ಗತಿಕ ಕ್ರಿಕೆಟಿಗರ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂದು ರವಿ ಹೇಳಿದ್ದಾರೆ.