ಅಬುಧಾಬಿ:ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಕ್ಯಾಪ್ಟನ್ ಆಗಿರುವ ಸ್ಮೀವ್ ಸ್ಮಿತ್ ಮುಂಬರುವ ಬಿಬಿಎಲ್ನಲ್ಲಿ ಆಡದಿರುವ ಮಾಹಿತಿ ನೀಡಿದ್ದಾರೆ.
ಆಸ್ಟ್ರೇಲಿಯಾದ ಮಾಜಿ ಕ್ಯಾಪ್ಟನ್ ಸ್ಮಿತ್ ಸದ್ಯ ಬಯೋ ಬಬಲ್ನಲ್ಲಿ ಒಳಗಾಗಿ ಐಪಿಎಲ್ ಆಡುತ್ತಿದ್ದು, ಅದರಿಂದ ಹೊರಬರುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿದು ಬಂದಿದೆ.
ಡಿಸೆಂಬರ್ 3ರಿಂದ ಬಿಗ್ ಬ್ಯಾಷ್ ಲೀಗ್ ಆರಂಭಗೊಳ್ಳಲಿದ್ದು, ಅದರಲ್ಲಿ ಭಾಗಿಯಾಗುವುದಿಲ್ಲ ಎಂದು ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಈಗಾಗಲೇ ಸ್ಪಷ್ಟ ಪಡಿಸಿದ್ದಾರೆ. ಎಲ್ಲ ಕ್ರಿಕೆಟ್ ಟೂರ್ನಿಗಳು ಬಯೋ ಬಬಲ್ನಿಂದ ನಡೆಯುತ್ತಿರುವ ಕಾರಣ ಆಟಗಾರರು ಇದರ ಒಳಗೆ ಇರಬೇಕಾಗುತ್ತದೆ. ಐಪಿಎಲ್ನಲ್ಲೂ ಇದೇ ಮಾರ್ಗಸೂಚಿ ಜಾರಿಯಲ್ಲಿರುವ ಕಾರಣ ಬಿಗ್ ಬ್ಯಾಷ್ನಲ್ಲಿ ಆಡಲು ಆಗುವುದಿಲ್ಲ ಎಂದು ಸ್ಮಿತ್ ಹೇಳಿದ್ದಾರೆ.
ಐಪಿಎಲ್ ಆರಂಭಗೊಳ್ಳುವುದಕ್ಕೂ ಮುಂಚಿತವಾಗಿ ಆಸ್ಟ್ರೇಲಿಯಾ ಪ್ಲೇಯರ್ಸ್ ಇಂಗ್ಲೆಂಡ್ ಪ್ರವಾಸದಲ್ಲಿದ್ದರೂ, ಈ ವೇಳೆ ಕೂಡ ಅವರೂ ಜೈವಿಕ ಸುರಕ್ಷಿತ ವಾತಾವರಣದಲ್ಲಿದ್ದರು. ಇನ್ನು ಡೇವಿಡ್ ವಾರ್ನರ್ ಹಾಗೂ ಪ್ಯಾಟ್ ಕಮ್ಮಿನ್ಸ್ ಕೂಡ ಈ ಸಲದ ಬಿಗ್ ಬ್ಯಾಷ್ ಲೀಗ್ನಲ್ಲಿ ಭಾಗಿಯಾಗುವ ಸಾಧ್ಯತೆ ಕಡಿಮೆ ಇದೆ.