ಮ್ಯಾಂಚೆಸ್ಟರ್ :ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೂ ಮುನ್ನ ಅಭ್ಯಾಸದ ಸಂದರ್ಭದಲ್ಲಿ ಕುತ್ತಿಗೆ ನೋವಿಗೆ ಒಳಗಾಗಿದ್ದ ಸ್ಮಿತ್, ಎರಡು ಕನ್ಕ್ಯೂಷನ್ ಟೆಸ್ಟ್ನಲ್ಲಿ ಉತ್ತೀರ್ಣರಾಗಿದ್ದು ಎರಡನೇ ಪಂದ್ಯಕ್ಕೆ ಲಭ್ಯರಾಗಲಿದ್ದಾರೆ ಎಂದು ತಿಳಿದು ಬಂದಿದೆ.
ಅಭ್ಯಾಸದ ವೇಳೆ ತಲೆಗೆ ಚೆಂಡು ಬಡಿದ ಪರಿಣಾಮ ಅವರು ಮೊದಲ ಪಂದ್ಯದಿಂದ ಹೊರಗುಳಿದಿದ್ದರೂ ಎಂದು ಫಿಂಚ್ ಶುಕ್ರವಾರ ಪಂದ್ಯಕ್ಕೂ ಮೊದಲು ತಿಳಿಸಿದ್ದರು. ಅವರ ಜಾಗದಲ್ಲಿ ಮಾರ್ಕಸ್ ಸ್ಟೋಯ್ನಿಸ್ 3ನೇ ಕ್ರಮಾಂದಲ್ಲಿ ಆಡಿ 43 ರನ್ ಗಳಿಸಿದ್ದರು. ಇದೀಗ ಶನಿವಾರ ಅವರು ಎರಡು ಕನ್ಕ್ಯೂಷನ್ ಟೆಸ್ಟ್ನಲ್ಲಿ ಪಾಸ್ ಆಗಿದ್ದು ಮೂರನೇ ಪಂದ್ಯದಲ್ಲಿ ಆಸೀಸ್ ತಂಡ ಸೇರಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.