ಕರ್ನಾಟಕ

karnataka

ETV Bharat / sports

39 ಎಸೆತ ಎದುರಿಸಿ ಫಸ್ಟ್​ ರನ್​ಗಳಿಸಿದ ಸ್ಮಿತ್​... ನ್ಯೂಜಿಲ್ಯಾಂಡ್​ ಬೌಲರ್​​ನ ರಿಯಾಕ್ಷನ್​ ಹೀಗಿತ್ತು! - Australia vs New Zealand Test

ಆಸ್ಟ್ರೇಲಿಯಾ-ನ್ಯೂಜಿಲ್ಯಾಂಡ್​ ತಂಡಗಳ ನಡುವಿನ ಕ್ರಿಕೆಟ್​​ ಪಂದ್ಯದಲ್ಲಿ ಸ್ಟೀವ್​ ಸ್ಮಿತ್​ ಮೊದಲ ರನ್​ಗಳಿಕೆ ಮಾಡಲು ಬರೋಬ್ಬರಿ 43 ನಿಮಿಷ ತೆಗೆದುಕೊಂಡಿರುವ ಘಟನೆ ನಡೆದಿದೆ.

Steve Smith Gets Off The Mark After 39 Balls
39 ಎಸೆತ ಎದುರಿಸಿ ಫಸ್ಟ್​ ರನ್​ಗಳಿಸಿದ ಸ್ಮಿತ್

By

Published : Jan 3, 2020, 5:14 PM IST

ಸಿಡ್ನಿ:ಆಸ್ಟ್ರೇಲಿಯಾ-ನ್ಯೂಜಿಲ್ಯಾಂಡ್​ ತಂಡಗಳ ನಡುವೆ ಮೂರನೇ ಟೆಸ್ಟ್​​ ಪಂದ್ಯ ಆರಂಭಗೊಂಡಿದ್ದು, ಟಾಸ್​​ ಗೆದ್ದ ಕಾಂಗರೂ ಪಡೆ ಬ್ಯಾಟಿಂಗ್​ ಆಯ್ದುಕೊಂಡಿದ್ದು, ಮೊದಲ ದಿನದ ಅಂತ್ಯಕ್ಕೆ ತಂಡ 3ವಿಕೆಟ್​ನಷ್ಟಕ್ಕೆ 283ರನ್​ಗಳಿಕೆ ಮಾಡಿದೆ. ಇದರ ಮಧ್ಯೆ ಅಪರೂಪದ ಘಟನೆವೊಂದು ನಡೆದಿದೆ.

ಸಿಡ್ನಿ ಕ್ರಿಕೆಟ್​ ಮೈದಾನದಲ್ಲಿ ಟೆಸ್ಟ್​​ ಪಂದ್ಯ ನಡೆಯುತ್ತಿದ್ದು, ಡೇವಿಡ್​ ವಾರ್ನರ್​ ವಿಕೆಟ್​ ಬೀಳುತ್ತಿದ್ದಂತೆ ಮೈದಾನಕ್ಕೆ ಬಂದ ಆಸ್ಟ್ರೇಲಿಯಾದ ಮಾಜಿ ಕ್ಯಾಪ್ಟನ್​ ಸ್ಟಿವ್​​ ಸ್ಮಿತ್​ ಮೊದಲ ರನ್​ಗಳಿಕೆ ಮಾಡಲು ಬರೋಬ್ಬರಿ 39 ಎಸೆತ ತೆಗೆದುಕೊಂಡಿರುವ ಘಟನೆ ನಡೆದಿದೆ.

39 ಎಸೆತ ಎದುರಿಸಿ ಫಸ್ಟ್​ ರನ್​ಗಳಿಸಿದ ಸ್ಮಿತ್

ಬರೋಬ್ಬರಿ 6 ಓವರ್​​ ಎದುರಿಸಿದ್ರೂ ಸ್ಮಿತ್​ ಯಾವುದೇ ರೀತಿಯ ರನ್​ಗಳಿಕೆ ಮಾಡಿಲ್ಲ. ಕೊನೆಯದಾಗಿ ನೀಲ್ ವ್ಯಾಗ್ನರ್​ ಓವರ್​​ನಲ್ಲಿ ಸಿಂಗಲ್​ ರನ್​ಗಳಿಕೆ ಮಾಡಿದ್ದಾರೆ. ಈ ವೇಳೆ ನ್ಯೂಜಿಲ್ಯಾಂಡ್​ ತಂಡದ ಪ್ಲೇಯರ್​​ ವ್ಯಾಗ್ನರ್​ ಅವರಿಗೆ ನಗುಮುಖದಿಂದಲೇ ಅಭಿನಂದನೆ ಸಲ್ಲಿಕೆ ಮಾಡಿದ್ದು, ಈ ವಿಡಿಯೋ ಇದೀಗ ವೈರಲ್​ ಆಗಿದೆ.

ಇನ್ನು 63ರನ್​ಗಳಿಕೆ ಮಾಡಿದ್ದ ವೇಳೆ ಸ್ಮಿತ್​​ ಗ್ರ್ಯಾಂಡ್​ಹೋಮ್​ ಓವರ್​​ನಲ್ಲಿ ವಿಕೆಟ್​ ನೀಡಿ ಪೆವಿಲಿಯನ್​ ಸೇರಿಕೊಂಡಿದ್ದಾರೆ. ಇದೇ ಪಂದ್ಯದಲ್ಲಿ ಮಾರ್ನಸ್​ ಲಾಬುಶೇನ್ ಅಜೇಯ 130ರನ್​ಗಳಿಕೆ ಮಾಡಿ ನಾಳೆಗೆ ಬ್ಯಾಟಿಂಗ್​ ಕಾಯ್ದಿರಿಸಿಕೊಂಡಿದ್ದಾರೆ.

ABOUT THE AUTHOR

...view details