ಕರ್ನಾಟಕ

karnataka

ETV Bharat / sports

46 ಇನ್ನಿಂಗ್ಸ್​ಗಳ ನಂತರ ಭಾರತದ ವಿರುದ್ಧ ಮೊದಲ ಬಾರಿಗೆ ಡಕ್​ಔಟ್ ಆದ ಸ್ಟಿವ್​ ಸ್ಮಿತ್​ - Malborne

ಎಂಸಿಜಿಯಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್​ನಲ್ಲಿ ಸ್ಟಿವ್ ಸ್ಮಿತ್​ ಆರ್​ ಅಶ್ವಿನ್​ ಬೌಲಿಂಗ್​ನಲ್ಲಿ ಸೊನ್ನೆಗೆ ವಿಕೆಟ್​ ಒಪ್ಪಿಸಿದರು. ಭಾರತ ತಂಡದ ಅದ್ಭುತ ದಾಖಲೆ ಹೊಂದಿರುವ ಸ್ಮಿತ್​ ಮೂರು ಮಾದರಿಯ ಕ್ರಿಕೆಟ್​ನಿಂದ 46 ಇನ್ನಿಂಗ್ಸ್​ನಲ್ಲಿ 2,660 ರನ್​ಗಳಿಸಿದ್ದರು. ಇದೀಗ 47ನೇ ಇನ್ನಿಂಗ್ಸ್​ನಲ್ಲಿ ಮೊದಲ ಬಾರಿಗೆ ಡಕ್​ ಔಟ್​ ಆಗಿದ್ದಾರೆ.

ಸ್ಟಿವ್​ ಸ್ಮಿತ್​
ಸ್ಟಿವ್​ ಸ್ಮಿತ್​

By

Published : Dec 26, 2020, 5:22 PM IST

ಮೆಲ್ಬೋರ್ನ್​:ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ಟೀವ್ ಸ್ಮಿತ್ ಭಾರತದ ವಿರುದ್ಧ ಮೂರು ಮಾದರಿಯ ಕ್ರಿಕೆಟ್​ನಲ್ಲಿ ಇದೇ ಮೊದಲ ಬಾರಿಗೆ ಡಕ್​ ಔಟ್​ ಆಗಿದ್ದಾರೆ.

ಎಂಸಿಜಿಯಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್​ನಲ್ಲಿ ಸ್ಟಿವ್ ಸ್ಮಿತ್​ ಆರ್​ ಅಶ್ವಿನ್​ ಬೌಲಿಂಗ್​ನಲ್ಲಿ ಸೊನ್ನೆಗೆ ವಿಕೆಟ್​ ಒಪ್ಪಿಸಿದರು. ಭಾರತ ತಂಡದ ಅದ್ಭುತ ದಾಖಲೆಯೊಂದಿರುವ ಸ್ಮಿತ್​ ಮೂರು ಮಾದರಿಯ ಕ್ರಿಕೆಟ್​ನಿಂದ 46 ಇನ್ನಿಂಗ್ಸ್​ನಲ್ಲಿ 2,660 ರನ್​ಗಳಿಸಿದ್ದರು. ಇದೀಗ 47ನೇ ಇನ್ನಿಂಗ್ಸ್​ನಲ್ಲಿ ಮೊದಲ ಬಾರಿಗೆ ಡಕ್​ ಔಟ್​ ಆಗಿದ್ದಾರೆ.

ಇದನ್ನು ಓದಿ: ಪಾದಾರ್ಪಣೆ ಪಂದ್ಯದಲ್ಲೇ ಮಿಂಚಿದ ಶುಬ್ಮನ್ ಗಿಲ್, ಸಿರಾಜ್​

ಸ್ಟಿವ್​ ಸ್ಮಿತ್​ ಭಾರತ ತಂಡದ ವಿರುದ್ಧ 12 ಶತಕ ಹಾಗೂ 6 ಅರ್ಧಶತಕ ಸಿಡಿಸಿದ್ದರು. ಅಷ್ಟೇ ಅಲ್ಲದೆ ಅವರು ಎಂಸಿಜಿಯಲ್ಲಿ 113.5 ಸರಾಸರಿಯಲ್ಲಿ ರನ್​ಗಳಿಸಿದ್ದರು. ಈ ಕ್ರೀಡಾಂಗಣದಲ್ಲಿ ಅವರು 4 ಶತಕ ಕೂಡ ಸಿಡಿಸಿದ್ದರು. 4 ವರ್ಷಗಳ ಬಳಿಕ ಹಾಗೂ 52 ಟೆಸ್ಟ್​ಗಳ ನಂತರ ಸ್ಟಿವ್ ಸ್ಮಿತ್​ ಮೊದಲ ಬಾರಿಗೆ ಶೂನ್ಯಕ್ಕೆ ವಿಕೆಟ್​ ಕಲ್ಪಿಸಿದ್ದಾರೆ.

ಈ ಸರಣಿಯಲ್ಲಿ ಸ್ಟಿವ್ ಸ್ಮಿತ್​ ಮೊದಲ ಟೆಸ್ಟ್​ನಲ್ಲೂ ಅಶ್ವಿನ್​ ಬೌಲಿಂಗ್​ನಲ್ಲಿ 1ರನ್​ಗಳಿಸಿ ಔಟಾಗಿದ್ದರು.

ABOUT THE AUTHOR

...view details