ಕರ್ನಾಟಕ

karnataka

ETV Bharat / sports

ಶೂನ್ಯ ಸುತ್ತಿ ಭಾರಿ ಬೆಲೆ ತೆತ್ತ ವಿರಾಟ್ ಕೊಹ್ಲಿ..! ಏನು ಗೊತ್ತಾ..? - ಸ್ಟೀವ್ ಸ್ಮಿತ್

ವಿಂಡೀಸ್ ವಿರುದ್ಧದ ಅಂತಿಮ ಟೆಸ್ಟ್​ನ ಎರಡನೇ ಇನ್ನಿಂಗ್ಸ್​ನಲ್ಲಿ ಕೊಹ್ಲಿ ಶೂನ್ಯ ಸುತ್ತಿದ ಪರಿಣಾಮ ಒಂದು ಅಂಕದ ಲೆಕ್ಕಾಚಾರದಲ್ಲಿ ಸ್ಮಿತ್ ಅಗ್ರಸ್ಥಾನ ಲಗ್ಗೆ ಇಟ್ಟಿದ್ದಾರೆ.

ವಿರಾಟ್ ಕೊಹ್ಲಿ

By

Published : Sep 3, 2019, 3:18 PM IST

ಹೈದರಾಬಾದ್:ಕಳೆದ ಸುಮಾರು ಒಂದು ವರ್ಷದಿಂದ ಐಸಿಸಿ ಟೆಸ್ಟ್ ರ್‍ಯಾಂಕಿಂಗ್​​ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೊನೆಗೂ ಮೊದಲ ಸ್ಥಾನದಿಂದ ಕೆಳಗಿಳಿದಿದ್ದಾರೆ.

ಸ್ಟೀವ್ ಸ್ಮಿತ್

ಆ್ಯಶಸ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಆಸೀಸ್ ಆಟಗಾರ ಸ್ಟೀವ್ ಸ್ಮಿತ್ ಬ್ಲೂ ಬಾಯ್ಸ್ ಕಪ್ತಾನನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದ್ದಾರೆ. ವಿಂಡೀಸ್ ವಿರುದ್ಧದ ಅಂತಿಮ ಟೆಸ್ಟ್​ನ ಎರಡನೇ ಇನ್ನಿಂಗ್ಸ್​ನಲ್ಲಿ ಕೊಹ್ಲಿ ಶೂನ್ಯ ಸುತ್ತಿದ ಪರಿಣಾಮ ಒಂದು ಅಂಕದ ಲೆಕ್ಕಾಚಾರದಲ್ಲಿ ಸ್ಮಿತ್ ಅಗ್ರಸ್ಥಾನ ಲಗ್ಗೆ ಇಟ್ಟಿದ್ದಾರೆ.

ಟೆಸ್ಟ್ ರ್‍ಯಾಂಕಿಂಗ್​​ನಲ್ಲಿ ಅಗ್ರಸ್ಥಾನಕ್ಕೇರಲು ಕೊಹ್ಲಿ ಅಕ್ಟೋಬರ್ ತನಕ ಕಾಯಲೇಬೇಕು. ಮುಂದಿನ ತಿಂಗಳಲ್ಲಿ ದಕ್ಷಿಣ ಆಫ್ರಿಕಾ ಭಾರತ ಪ್ರವಾಸ ಕೈಗೊಳ್ಳಲಿದ್ದು ಈ ವೇಳೆ ಕೊಹ್ಲಿ ಅಗ್ರಸ್ಥಾನಕ್ಕೇರಲು ಅವಕಾಶ ಹೊಂದಿದ್ದಾರೆ.

ಇನ್ನುಳಿದಂತೆ ಟೀಂ ಇಂಡಿಯಾ ಆಟಗಾರ ಅಜಿಂಕ್ಯ ರಹಾನೆ ಅಗ್ರ ಹತ್ತರೊಳಗೆ ಕಾಣಿಸಿಕೊಂಡಿದ್ದಾರೆ. ಆರು ಟೆಸ್ಟ್ ಪಂದ್ಯವನ್ನಾಡಿರುವ ಶತಕವೀರ ಹನುಮ ವಿಹಾರಿ ಮೂವತ್ತನೇ ಸ್ಥಾನಕ್ಕೆ ಜಿಗಿದಿದ್ದಾರೆ.

ಜಸ್ಪ್ರೀತ್ ಬುಮ್ರಾ

ಕೆರಬಿಯನ್ನರ ನಾಡಿನಲ್ಲಿ ಹ್ಯಾಟ್ರಿಕ್ ಸೇರಿದಂತೆ ಭರ್ಜರಿ ಬೌಲಿಂಗ್ ಪ್ರದರ್ಶಿಸಿದ ಜಸ್ಪ್ರೀತ್ ಬುಮ್ರಾ ನಾಲ್ಕು ಸ್ಥಾನಗಳ ಏರಿಕೆ ಕಂಡು ಮೂರನೇ ಸ್ಥಾನ ಪಡೆದಿದ್ದಾರೆ. ಆಸ್ಟ್ರೇಲಿಯಾದ ವೇಗಿ ಪ್ಯಾಟ್ ಕಮಿನ್ಸ್ ಭಾರಿ ಅಂತರದೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರೆದಿದ್ದಾರೆ.

ABOUT THE AUTHOR

...view details