ಲಂಡನ್: ಆಸ್ಟ್ರೇಲಿಯಾ ತಂಡದ ಅತ್ಯುತ್ತಮ ಟೆಸ್ಟ್ ಬ್ಯಾಟ್ಸ್ಮನ್ ಎನಿಸಿಕೊಂಡಿರುವ ಸ್ಟಿವ್ ಸ್ಮಿತ್ ಪ್ರಸ್ತುತ ಸರಣಿಯಲ್ಲಿ 774 ರನ್ ಗಳಿಸುವ ಮೂಲಕ ಸರಣಿಯೊಂದರಲ್ಲಿ ಹೆಚ್ಚು ರನ್ ಗಳಿಸಿದ ದಾಖಲೆಯಲ್ಲಿ ಭಾರತದ ಸುನಿಲ್ ಗವಾಸ್ಕರ್ ಅವರನ್ನು ಹಿಂದಿಕ್ಕಿದ್ದಾರೆ.
ಪ್ರಸ್ತುತ ಸರಣಿಯಲ್ಲಿ 7 ಇನ್ನಿಂಗ್ಸ್ ಮಾತ್ರ ಆಡಿರುವ ಸ್ಟಿವ್ ಸ್ಮಿತ್ ಬರೋಬ್ಬರಿ 774 ರನ್ ಬಾರಿಸಿದ್ದಾರೆ. ಇದರಲ್ಲಿ 3 ಅರ್ಧಶತಕ, 2 ಶತಕ ಹಾಗೂ ಒಂದು ದ್ವಿಶತಕ ಸೇರಿದೆ. ಭಾರತದ ಸುನಿಲ್ ಗವಾಸ್ಕರ್ 1970/71 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 4 ಪಂದ್ಯಗಳಲ್ಲಿ 774 ರನ್ ಗಳಿಸಿದ್ದರು. ಇದೀಗ ಸ್ಮಿತ್ 4 ಪಂದ್ಯಗಳಲ್ಲಿ 7 ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿ ಅಷ್ಟೇ ರನ್ ಗಳಿಸಿ ಗವಾಸ್ಕರ್ ಅವರನ್ನು ಹಿಂದಿಕ್ಕಿದ್ದಾರೆ.
ಸ್ಟಿವ್ ಸ್ಮಿತ್ ಪ್ರಸ್ತುತ ಸರಣಿಯಲ್ಲಿ 7 ಇನ್ನಿಂಗ್ಸ್ಗಳಲ್ಲಿ 144, 142, 92, 211, 82, 80 ಹಾಗೂ 23 ರನ್ ಗಳಿಸಿದ್ದಾರೆ. ಕೊನೆಯ ಪಂದ್ಯದ 2ನೇ ಇನ್ನಿಂಗ್ಸ್ನಲ್ಲಿ ಮಾತ್ರ ಕನಿಷ್ಠ ಅರ್ಧಶತಕ ಬಾರಿಸುವಲ್ಲಿ ಸ್ಮಿತ್ ವಿಫಲರಾಗಿದ್ದಾರೆ. ಇನ್ನುಳಿದ ಪಂದ್ಯಗಳಲ್ಲಿ 80+ ರನ್ ಬಾರಿಸಿ ದಾಖಲೆ ಬರೆದಿದ್ದರು.