ಕರ್ನಾಟಕ

karnataka

ETV Bharat / sports

ಕ್ರೀಸ್ ಅಳಿಸಿದ ಘಟನೆ; ಪ್ರತಿಕ್ರಿಯೆ ಕಂಡು ಆಘಾತವಾಗಿದೆ ಎಂದ ಸ್ಮಿತ್ - ಸ್ಮಿತ್ ವಿರುದ್ಧ ಜಾಲತಾಣದಲ್ಲಿ ಆಕ್ರೋಶ

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯದ ಐದನೇ ದಿನದಂದು ಸ್ಮಿತ್ ಬ್ಯಾಟಿಂಗ್ ಕ್ರೀಸ್ ಸುತ್ತಲಿನ ಪ್ರದೇಶವನ್ನು ಶೂನಲ್ಲಿ ಅಳಿಸುತ್ತಿರುವುದು ಕಂಡುಬಂತು. ಈ ಬಗ್ಗೆ ನೆಟ್ಟಿಗರು ಸ್ಮಿತ್​ ಅವರ ವರ್ತನೆಯನ್ನು ಪ್ರಶ್ನಿಸಲು ಪ್ರಾರಂಭಿಸಿದರು.

Steve Smith
ಸ್ಟೀವ್ ಸ್ಮಿತ್

By

Published : Jan 13, 2021, 1:01 PM IST

ಬ್ರಿಸ್ಬೇನ್:ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಭಾರತ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಅಂತಿಮ ದಿನದಂದು ಬ್ಯಾಟಿಂಗ್ ಕ್ರೀಸ್‌ನ ಸುತ್ತಲಿನ ಪ್ರದೇಶವನ್ನು ತನ್ನ ಶೂ ನಿಂದ ಅಳಿಸಿದ್ದಕ್ಕೆ ಬಂದ ಪ್ರತಿಕ್ರಿಯೆಯನ್ನು ನೋಡಿ ಆಘಾತಕ್ಕೊಳಗಾಗಿದ್ದೇನೆ ಎಂದು ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಹೇಳಿದ್ದಾರೆ.

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯದ ಐದನೇ ದಿನದಂದು ಸ್ಮಿತ್ ಬ್ಯಾಟಿಂಗ್ ಕ್ರೀಸ್ ಸುತ್ತಲಿನ ಪ್ರದೇಶವನ್ನು ಶೂನಲ್ಲಿ ಅಳಿಸುತ್ತಿರುವುದು ಕಂಡುಬಂತು. ಈ ಬಗ್ಗೆ ನೆಟ್ಟಿಗರು ಸ್ಮಿತ್​ ಅವರ ವರ್ತನೆಯನ್ನು ಪ್ರಶ್ನಿಸಲು ಪ್ರಾರಂಭಿಸಿದರು.

ಓದಿಪೇನ್ ಮೇಲೆ ನಂಬಿಕೆ ಇದೆ ಎಂದ ಲ್ಯಾಂಗರ್: ಸ್ಮಿತ್ ವರ್ತನೆಗೆ ಕೋಚ್ ಪ್ರತಿಕ್ರಿಯೆ ಹೀಗಿದೆ..

"ಈ ಪ್ರತಿಕ್ರಿಯೆಯಿಂದ ನಾನು ಸಾಕಷ್ಟು ಆಘಾತಕ್ಕೊಳಗಾಗಿದ್ದೇನೆ ಮತ್ತು ನಿರಾಸೆಗೊಂಡಿದ್ದೇನೆ. ನಾವು ಎಲ್ಲಿ ಬೌಲಿಂಗ್ ಮಾಡುತ್ತಿದ್ದೇವೆ, ಬ್ಯಾಟ್ಸ್​ಮನ್​ಗಳು ನಮ್ಮ ಎಸೆತಗಳನ್ನು ಹೇಗೆ ಎದುರಿಸುತ್ತಿದ್ದಾರೆ ಎಂಬುದನ್ನು ನಾನು ಯಾವಾಗಲೂ ಗುರುತಿಸುತ್ತಿರುತ್ತೇನೆ" ಎಂದು ಸ್ಮಿತ್ ಡೈಲಿ ಟೆಲಿಗ್ರಾಫ್‌ಗೆ ತಿಳಿಸಿದ್ದಾರೆ.

ಬುಧವಾರ, ಆಸ್ಟ್ರೇಲಿಯಾದ ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಸಹ ಸ್ಮಿತ್ ಅವರ ವರ್ತನೆಯನ್ನು ಸಮರ್ಥಿಸಿಕೊಂಡಿದ್ದರು. ಅಲ್ಲದೆ ಈ ಘಟನೆಯಿಂದ ಜನರು ಅವರ ಆಟದ ಸಾಮರ್ಥ್ಯದ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಹೇಳಿದರು.

ABOUT THE AUTHOR

...view details