ಜೈಪುರ್:ಕೊರೊನಾ ವಿರುದ್ಧ ಹೋರಾಟ ಮಾಡಲು ಇಡೀ ವಿಶ್ವವೇ ಒಂದಾಗಿದೆ. ಭಾರತದಲ್ಲೂ ಇದರ ವಿರುದ್ಧ ಸಮರ ಸಾರಿದ್ದು, ಅನೇಕ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಇದೀಗ ಟೀಂ ಇಂಡಿಯಾ ಕ್ಯಾಪ್ಟನ್ ಕೂಡ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿದ್ದಾರೆ.
ಹೆದರದೇ ಕೊರೊನಾ ವೈರಸ್ ವಿರುದ್ಧ ಹೋರಾಡಿ, ಕೊಹ್ಲಿಯಿಂದ ಸ್ಪೂರ್ತಿದಾಯಕ ಸಂದೇಶ!
ಕೊರೊನಾ ವೈರಸ್ ಭೀತಿಯಿಂದ ಭಾರತದ ಆತಂಕಕ್ಕೊಳಗಾಗಿದ್ದು, ಅದರಿಂದ ಹೆದರದೇ ಮಹಾಮಾರಿ ವಿರುದ್ಧ ಹೋರಾಟ ನಡೆಸುವಂತೆ ಟೀಂ ಇಂಡಿಯಾ ಕ್ಯಾಪ್ಟನ್ ಕೊಹ್ಲಿ ಟ್ಟೀಟ್ ಮಾಡಿ ಧೈರ್ಯ ತುಂಬಿದ್ದಾರೆ.
ಗಟ್ಟಿಯಾಗಿದ್ದು, ಕೊರೊನಾ ವೈರಸ್ ವಿರುದ್ಧ ಹೋರಾಟ ನಡೆಸಿ. ಅದಕ್ಕೆ ಸಂಬಂಧಿಸಿದ ಎಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ ಎಂದಿರುವ ಕೊಹ್ಲಿ, ಸುರಕ್ಷಿತವಾಗಿರಿ, ಜಾಗರೂಕರಾಗಿರಿ ಮತ್ತು ಅದನ್ನ ತಡೆಗಟ್ಟಲು ಎಲ್ಲ ರೀತಿಯ ಕ್ರಮ ಕೈಗೊಳ್ಳಿ ಎಂದು ಟ್ವೀಟ್ ಮಾಡಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಭಾಗಿಯಾಗಿದ್ದ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಕೊರೊನಾ ವೈರಸ್ನಿಂದ ಸರಣಿ ರದ್ದುಗೊಳಿಸಲಾಗಿದೆ. ಇದರ ಬೆನ್ನಲ್ಲೇ ಅವರು ಈ ಸ್ಪೂರ್ತಿದಾಯಕ ಸಂದೇಶ ರವಾನೆ ಮಾಡಿದ್ದಾರೆ.
ಚೀನಾದಲ್ಲಿ ಹುಟ್ಟಿಕೊಂಡು ಬರೋಬ್ಬರಿ 100 ದೇಶಗಳಿಗೆ ಲಗ್ಗೆ ಹಾಕಿರುವ ಕೊರೊನಾ ಈಗಾಗಲೇ 5 ಸಾವಿರಕ್ಕೂ ಅಧಿಕ ಜನರ ಬಲಿ ಪಡೆದುಕೊಂಡಿದ್ದು, 1,20,000 ಲಕ್ಷ ಜನರಲ್ಲಿ ವೈರಾಣು ಕಾಣಿಸಿಕೊಂಡಿದೆ. ಭಾರತದಲ್ಲೂ 82 ಪ್ರಕರಣಗಳು ಕಾಣಿಸಿಕೊಂಡಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ.