ಮೆಲ್ಬೋರ್ನ್:ನಾಳೆ ಮೆಲ್ಬೋರ್ನ್ ಮೈದಾನದಲ್ಲಿ ಭಾರತ-ಆಸ್ಟ್ರೇಲಿಯಾ ಮಹಿಳಾ ತಂಡಗಳ ನಡುವೆ ಐಸಿಸಿ ಟಿ-20 ಕ್ರಿಕೆಟ್ ಸರಣಿಯ ಫೈನಲ್ ಪಂದ್ಯ ನಡೆಯಲಿದ್ದು, ಹರ್ಮನ್ ಪ್ರೀತ್ ಕೌರ್ ಪಡೆ ಚೊಚ್ಚಲ ಪ್ರಶಸ್ತಿ ಮೇಲೆ ಕಣ್ಣಿಟ್ಟು ಮೈದಾನಕ್ಕಿಳಿಯಲಿದೆ.
ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಕೂಡ ಎಲ್ಲ ವಿಭಾಗಗಳಲ್ಲೂ ಬಲಿಷ್ಠವಾಗಿದ್ದು, ಪ್ರಶಸ್ತಿಗೆ ಮುತ್ತಿಕ್ಕುವ ಹುಮ್ಮಸ್ಸಿನಲ್ಲಿದೆ. ಪಂದ್ಯ ವೀಕ್ಷಣೆ ಮಾಡಲು ಲಕ್ಷಾಂತರ ಜನರು ಸೇರುವ ಸಾಧ್ಯತೆ ದಟ್ಟವಾಗಿದೆ.
ಅಲಿಸ್ಸಾ ಹೀಲಿ - ಮಿಚೆಲ್ ಸ್ಟಾರ್ಕ್ ಇದರ ಮಧ್ಯೆ ಆಸ್ಟ್ರೇಲಿಯಾದ ವೇಗಿ ಮಿಚಲ್ ಸ್ಟಾರ್ಕ್ ಕೂಡ ಪ್ರಯಾಣ ಬೆಳೆಸುತ್ತಿದ್ದಾರೆ. ಸದ್ಯ ದಕ್ಷಿಣ ಆಫ್ರಿಕಾ ವಿರುದ್ಧ ಕಾಂಗರೂ ಪಡೆ ಏಕದಿನ ಕ್ರಿಕೆಟ್ ಸರಣಿಯಲ್ಲಿ ಭಾಗಿಯಾಗಿದ್ದು, ನಾಳೆ ಫೈನಲ್ ಪಂದ್ಯ ನಡೆಯಲಿದೆ. ಆಡಿರುವ ಎರಡು ಪಂದ್ಯಗಳಲ್ಲಿ 0-2 ಅಂತರದಿಂದ ಕೈಚೆಲ್ಲಿರುವ ಆಸ್ಟ್ರೇಲಿಯಾ ನಾಳೆಯ ಪಂದ್ಯದಲ್ಲಿ ಗೆಲುವು ಸಾಧಿಸಿ ವೈಟ್ವಾಶ್ ಮುಖಭಂಗ ತಪ್ಪಿಸಿಕೊಳ್ಳುವ ಇರಾದೆಯಲ್ಲಿದೆ. ಆದರೆ, ತಮ್ಮ ಹೆಂಡತಿ ಫೈನಲ್ ಪಂದ್ಯದಲ್ಲಿ ಭಾಗಿಯಾಗುತ್ತಿರುವ ಕಾರಣ ಅಲಿಸ್ಸಾ ಹೀಲಿ ಪ್ರದರ್ಶನ ನೋಡಲು ಮಿಚೆಲ್ ಪ್ರಯಾಣ ಬೆಳೆಸಿದ್ದಾರೆ.
ಅಲಿಸ್ಸಾ ಹೀಲಿ - ಮಿಚೆಲ್ ಸ್ಟಾರ್ಕ್ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ತಂಡದ ಕೋಚ್, ಐಸಿಸಿ ಮಹಿಳಾ ಟಿ-20 ವಿಶ್ವಕಪ್ನಕಲ್ಲಿ ತಮ್ಮ ಹೆಂಡತಿ ಆಟ ನೋಡಲು ಅವರಿಗೆ ಅವಕಾಶ ಒದಗಿ ಬಂದಿದೆ. ಹೀಗಾಗಿ ಅವರನ್ನ ಕಳುಹಿಸಿಕೊಡಲಾಗುತ್ತಿದ್ದು, ಅವರ ಸ್ಥಾನ ತುಂಬಲು ನಮ್ಮಲ್ಲಿ ಅನೇಕ ಬೌಲರ್ಸ್ ಇದ್ದಾರೆ ಎಂದು ತಿಳಿಸಿದ್ದಾರೆ.