ಕರ್ನಾಟಕ

karnataka

ETV Bharat / sports

92 ರನ್​ಗಳ​ ಟಾರ್ಗೆಟ್​ ನೀಡಿ 3 ರನ್​ಗಳ ಜಯ ಸಾಧಿಸಿ ದಾಖಲೆ ಬರೆದ ಸೇಂಟ್​ ಲೂಸಿಯಾ ಜೌಕ್ಸ್​ - ಅತಿಕಡಿಮೆ ರನ್​ ಡಿಫೆಂಡ್​

ಕಳೆದ ವಾರ ಜಮೈಕಾ ತಲವಾಸ್​ 119 ರನ್​ ಚೇಸ್​ ಮಾಡಲಾಗದೆ ಗಯಾನ ವಿರುದ್ಧ 14 ರನ್​ಗಳ ಸೋಲು ಕಂಡಿತ್ತು. ಇದೀಗ ಸೇಂಟ್​ ಲೂಸಿಯಾ ತಂಡ 92 ರನ್​ಗಳನ್ನು ಡಿಫೆಂಡ್​ ಮಾಡಿಕೊಳ್ಳುವ ಮೂಲಕ ಸಿಪಿಎಲ್​ನಲ್ಲಿ ಕಡಿಮೆ ಮೊತ್ತವನ್ನು ಡಿಫೆಂಡ್​ ಮಾಡಿಕೊಂಡ ತಂಡ ಎಂಬ ದಾಖಲೆ ಬರೆದಿದೆ. ​

ಸೇಂಟ್​ ಲೂಸಿಯಾ ಜೌಕ್ಸ್​
ಸೇಂಟ್​ ಲೂಸಿಯಾ ಜೌಕ್ಸ್​

By

Published : Aug 31, 2020, 1:35 PM IST

ಟ್ರಿನಿಡಾಡ್​:ಡರೇನ್​ ಸಾಮಿ ನೇತೃತ್ವದ ಸೇಂಟ್​ ಲೂಸಿಯಾ ಜೌಕ್ಸ್​ ತಂಡ ಕೇವಲ 93 ರನ್​ಗಳ ಗುರಿ ನೀಡಿದರೂ ಎದುರಾಳಿ ಬಾರ್ಬಡೋಸ್​ ಟ್ರಿಂಡೆಂಟ್ಸ್​ ತಂಡವನ್ನು 89 ರನ್​ಗಳಿಗೆ ನಿಯಂತ್ರಿಸುವ ಮೂಲಕ 3 ರನ್​ಗಳ ಜಯ ಸಾಧಿಸಿದೆ.

ಮೊದಲು ಬ್ಯಾಟಿಂಗ್​ ನಡೆಸಿದ ಸೇಂಟ್​ ಲೂಸಿಯಾ ಜೌಕ್ಸ್​ ಹೇಡನ್​ ವಾಲ್ಶ್​ (19ಕ್ಕ3) ಆರ್.ರೀಫರ್​ ದಾಳಿಗೆ ಸಿಲುಕಿ 18 ಓವರ್​ಗಳಲ್ಲಿ ಕೇವಲ 92 ರನ್​ಗಳಿಗೆ ಆಲೌಟ್ ಆಗಿತ್ತು. ನಜೀಬುಲ್ಲಾ ಜಾಡ್ರನ್​ 22 ರನ್ ​ಗಳಿಸಿದ್ದೇ ತಂಡದ ಗರಿಷ್ಠ ಸ್ಕೋರ್​ ಆಗಿತ್ತು.

93 ರನ್​ಗಳ ಗುರಿ ಬೆನ್ನತ್ತಿದ ಟ್ರಿಂಡೆಂಟ್ಸ್​ ತಂಡ ಮೊದಲ ವಿಕೆಟ್​ಗೆ 32 ರನ್​ ಗಳಿಸಿ ಉತ್ತಮ ಆರಂಭ ಪಡೆಯಿತು. ಆದರೆ ಶಾಯ್ ಹೋಪ್ ಔಟಾಗುತ್ತಿದ್ದಂತೆ ದಿಢೀರ್​ ಕುಸಿತ ಕಂಡಿತು. ನಂತರ ಬಂದ ಕೈಲ್​ ಮೇಯರ್ಸ್​ 2, ಹೋಲ್ಡರ್ ​1, ಕೋರಿ ಆ್ಯಂಡರ್ಸನ್​ 11, ನರ್ಸ್​ 12, ರಶೀದ್​ ಖಾನ್​ 2 ರನ್ ​ಗಳಿಸಿ ಔಟಾದರು.

ಕೊನೆಯ ಓವರ್​ನಲ್ಲಿ ಗೆಲ್ಲಲು ಹೋಲ್ಡರ್​ ಪಡೆಗೆ 9 ರನ್​ಗಳ ಅಗತ್ಯವಿತ್ತು. ಆದರೆ ಒಂದು ವಿಕೆಟ್​ ಕಳೆದುಕೊಂಡು 5 ರನ್ ​ಗಳಿಸಲಷ್ಟೇ ಶಕ್ತವಾಗಿ ಕೆರಿಬಿಯನ್ ಪ್ರೀಮಿಯರ್​ ಲೀಗ್​ನಲ್ಲೇ ಹೀನಾಯ ಸೋಲು ಕಂಡಿತು. ಜಾನ್ಸನ್​ ಚಾರ್ಲ್ಸ್​ 39 ರನ್ ​ಗಳಿಸಿದರಾದರೂ ತಂಡಕ್ಕೆ ಗೆಲುವು ತಂದುಕೊಡಲಾಗಲಿಲ್ಲ.

ಕಳೆದ ವಾರ ಜಮೈಕಾ ತಲವಾಸ್​ 119 ರನ್​ ಚೇಸ್​ ಮಾಡಲಾಗದೆ ಗಯಾನ ವಿರುದ್ಧ 14 ರನ್​ಗಳ ಸೋಲು ಕಂಡಿತ್ತು. ಇದೀಗ ಸೇಂಟ್​ ಲೂಸಿಯಾ ತಂಡ 92 ರನ್​ಗಳನ್ನು ಡಿಫೆಂಡ್​ ಮಾಡಿಕೊಳ್ಳುವ ಮೂಲಕ ಸಿಪಿಎಲ್​ನಲ್ಲಿ ಕಡಿಮೆ ಮೊತ್ತವನ್ನು ಡಿಫೆಂಡ್​ ಮಾಡಿಕೊಂಡ ತಂಡ ಎಂಬ ದಾಖಲೆ ಬರೆದಿದೆ. ​

ABOUT THE AUTHOR

...view details