ಬ್ರಿಸ್ಬೇನ್: ಶ್ರೀಲಂಕಾದ ಲಕ್ಷನ್ ಸಂದಕನ್ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟಿ-20 ಪಂದ್ಯದಲ್ಲಿ ತುಂಬಾ ಸುಲಭವಾಗಿ ರನ್ ಮಾಡುವ ಅವಕಾಶವನ್ನು ಅವಸರದ ನಿರ್ಧಾರದಿಂದ ಮಿಸ್ ಮಾಡಿಕೊಂಡು ಟ್ರೋಲ್ಗೆ ತುತ್ತಾಗಿದ್ದಾರೆ.
ಈ ರೀತಿ ಸುಲಭದ ರನ್ಔಟ್ ಮಿಸ್ ಮಾಡಿರೋದನ್ನು ನೀವು ನೋಡಿರೋಕೆ ಸಾಧ್ಯವೇ ಇಲ್ಲ!... ವಿಡಿಯೋ - ಸಂದಕನ್ ರನ್ಔಟ್ ಮಿಸ್
ಶ್ರೀಲಂಕಾದ ಲಕ್ಷನ್ ಸಂದಕನ್ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟಿ-20 ಪಂದ್ಯದಲ್ಲಿ ತುಂಬಾ ಸುಲಭವಾಗಿ ರನ್ ಮಾಡುವ ಅವಕಾಶವನ್ನು ಅವಸರದ ನಿರ್ಧಾರದಿಂದ ಮಿಸ್ ಮಾಡಿಕೊಂಡಿದ್ದಾರೆ.
ಬ್ರಿಸ್ಬೇನ್ ಗಬ್ಬಾ ಕ್ರೀಡಾಂಗಣದಲ್ಲಿ ನಡೆದ ಎರಡನೇ ಟಿ-20 ಪಂದ್ಯದ ವೇಳೆ ಡೇವಿಡ್ ವಾರ್ನರ್ ಹೊಡೆದ ಚೆಂಡು ಸೀದ ನಾನ್ಸ್ಟ್ರೈಕರ್ ಸ್ಟಂಪ್ಗೆ ಬಡಿದಿದೆ. ಇದೇ ವೇಳೆ, ನಾನ್ಸ್ಟ್ರೈಕರ್ನಲ್ಲಿದ್ದ ಸ್ಟಿವ್ ಸ್ಮಿತ್ ರನ್ಗಾಗಿ ಕ್ರೀಸ್ಬಿಟ್ಟು ಅರ್ಧ ಬಂದಿದ್ದರು. ಈ ವೇಳೆ, ಕೈಗೆ ಚೆಂಡು ಸಿಕ್ಕಿದ ಕೂಡಲೆ ಸಂದಕನ್ ವಿಕೆಟ್ ಕಿತ್ತಿದ್ದಾರೆ. ಆದರೆ ಅಂಪೈರ್ ರನ್ಔಟ್ ಮಾನ್ಯ ಮಾಡಿಲ್ಲ.
ಹೌದು, ಒಂದು ಬಾರಿ ಬೇಲ್ಸ್ ಬಿದ್ದರೆ ನಂತರ ಔಟ್ ಮಾಡಬೇಕೆಂದರೆ ಚೆಂಡು ತಾಗಿದಂತೆ ಸ್ಟಂಪ್ ಕೀಳಬೇಕು. ಆದರೆ ಸಂದಕನ್ ಒಂದು ಕೈಯಲ್ಲಿ ಚೆಂಡು ಹಿಡಿದುಕೊಂಡು ಮತ್ತೊಂದು ಕೈಯಲ್ಲಿ ಸ್ಟಂಪ್ ಕಿತ್ತಿದ್ದಾರೆ. ಆದರೆ ಸ್ಟಂಪ್ಗೆ ಚೆಂಡನ್ನು ತಾಗಿಸುವುದನ್ನು ಮರೆತಿದ್ದಾರೆ. ಈ ಎಡವಟ್ಟಿನಿಂದ ರನ್ಔಟ್ ಮಾಡುವ ಸುಲಭ ಅವಕಾಶವನ್ನು ಕೈಯ್ಯಾರೆ ಕಳೆದುಕೊಂಡರು.
ಈ ಟಿ-20 ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 9 ವಿಕೆಟ್ಗಳಿಂದ ಮಣಿಸಿದ ಆಸ್ಟ್ರೇಲಿಯಾ ತಂಡ ಇನ್ನು ಒಂದು ಪಂದ್ಯವಿರುವಂತೆಯೇ ಸರಣಿ ವಶಪಡಿಸಿಕೊಂಡಿತು. ಈ ಪಂದ್ಯದಲ್ಲಿ ನಿಷೇಧದ ನಂತರ ಮೊದಲ ಟಿ-20 ಸರಣಿಯಾಡುತ್ತಿರುವ ವಾರ್ನರ್-ಸ್ಮಿತ್ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದರು.