ಕರ್ನಾಟಕ

karnataka

ETV Bharat / sports

2011ರ ವಿಶ್ವಕಪ್​ ಫಿಕ್ಸಿಂಗ್​​ ಆರೋಪ: ತನಿಖೆ ನಡೆಸಲು ಲಂಕಾ ಸರ್ಕಾರ ಆದೇಶ - 2011ರ ವಿಶ್ವಕಪ್​ ಫೈನಲ್​

2011ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯ ಫಿಕ್ಸ್​ ಆಗಿತ್ತು ಎಂದು ಶ್ರೀಲಂಕಾದ ಮಾಜಿ ಕ್ರೀಡಾ ಸಚಿವ ಮಹಿಂದಾನಂದ್​ ಅಲುತ್‌ಗಮಾಗೆ ಆರೋಪಿಸಿದ್ದು, ಇದೀಗ ತನಿಖೆಗೆ ಅಲ್ಲಿನ ಸರ್ಕಾರ ಆದೇಶ ನೀಡಿದೆ.

2011ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯ
2011ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯ

By

Published : Jun 19, 2020, 10:51 PM IST

ಕೊಲಂಬೊ:2011ರಲ್ಲಿ ನಡೆದ ಭಾರತ-ಶ್ರೀಲಂಕಾ ನಡುವಿನ ಏಕದಿನ ವಿಶ್ವಕಪ್​ ಫೈನಲ್​​ ಪಂದ್ಯ ಫಿಕ್ಸಿಂಗ್​ ಆಗಿತ್ತು ಎಂದು ಲಂಕಾ ಮಾಜಿ ಕ್ರೀಡಾ ಸಚಿವ ಮಹಿಂದಾನಂದ್​ ಅಲುತ್​ಗಮಾ ಆರೋಪಿಸಿದ್ದು, ಇದೀಗ ಅಲ್ಲಿನ ಸರ್ಕಾರ ಇದರ ತನಿಖೆ ನಡೆಸಲು ಆದೇಶ ನೀಡಿದೆ.

ವಿಶ್ವಕಪ್​ ಫೈನಲ್​ ಪಂದ್ಯ ಫಿಕ್ಸ್​ ಆಗಿತ್ತು. ಇದರಲ್ಲಿ ಯಾವುದೇ ಕ್ರಿಕೆಟರ್ಸ್​ ಭಾಗಿಯಾಗಿರಲಿಲ್ಲ. ಬದಲಾಗಿ ಬೇರೆ ಪಕ್ಷಗಳು ಶಾಮೀಲಾಗಿದ್ದವು ಎಂದಿದ್ದ ಅವರು, ಆ ಪಂದ್ಯವನ್ನ ಮಾರಾಟ ಮಾಡಲಾಗಿತ್ತು ಎಂದು ಸ್ಥಳೀಯ ಸುದ್ದಿ ವಾಹಿನಿಗೆ ನೀಡಿದ್ದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

2011ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯ

ಇದೀಗ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿರುವ ಅಲ್ಲಿನ ಸರ್ಕಾರ ಸಮಗ್ರ ತನಿಖೆ ನಡೆಸಲು ಆದೇಶ ಹೊರಹಾಕಿದೆ. ಕ್ರೀಡಾ ಸಚಿವಾಲಯದ ಕಾರ್ಯದರ್ಶಿ ಕೆ.ಎ.ಡಿ.ಎಸ್​​​ ರುವಾನಚಂದ್ರ ತನಿಖೆ ನಡೆಸಲು ಆದೇಶ ಹೊರಡಿಸಿದ್ದಾರೆ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ ಕ್ರೀಡಾ ಸಚಿವ ಅಲುತ್‌ಗಮಾ ಹಾಗೂ ಅಂದಿನ ಶ್ರೀಲಂಕಾ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಇಬ್ಬರೂ ಆಹ್ವಾನಿತರಾಗಿದ್ದರು. ಇವರ ಆರೋಪಕ್ಕೆ ಈಗಾಗಲೇ ಅಂದಿನ ಶ್ರೀಲಂಕಾ ತಂಡದ ಕ್ಯಾಪ್ಟನ್​ ಕುಮಾರ್​ ಸಂಗಕ್ಕಾರ್​ ಮತ್ತು ವಿಕೆಟ್​ ಕೀಪರ್​ ಮಹೇಲ್​​ ಜಯವರ್ದನೆ ತಳ್ಳಿ ಹಾಕಿದ್ದು, ಸಾಕ್ಷ್ಯಾಧಾರಗಳಿದ್ದರೆ ತೋರಿಸಿ ಎಂದಿದ್ದಾರೆ. ಈ ಫೈನಲ್​ ಪಂದ್ಯದಲ್ಲಿ ಶ್ರೀಲಂಕಾ ನೀಡಿದ್ದ 275 ರನ್​ಗಳ ಗುರಿಯನ್ನ ಭಾರತ ಸುಲಭವಾಗಿ ಗಳಿಸುವ ಮೂಲಕ ವಿಶ್ವಕಪ್​ ಎತ್ತಿ ಹಿಡಿದು, ಹೊಸ ಇತಿಹಾಸ ಬರೆದಿತ್ತು.

ABOUT THE AUTHOR

...view details