ಮುಂಬೈ:ವಿಶ್ವದ ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿರುವ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಯನ್ನು 3 ಮಾದರಿಯಲ್ಲಿನ ಶ್ರೇಷ್ಠ ಕ್ರಿಕೆಟಿಗ ಎಂಬುದು ಕೇವಲ ಅತಿಶಯೋಕ್ತಿ ಎಂದ ಶ್ರೀಲಂಕಾ ಪತ್ರಕರ್ತನಿಗೆ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಅಲೆಕ್ಸ್ ಟ್ಯುಡೋರ್ ತಿರುಗೇಟು ನೀಡಿದ್ದಾರೆ.
ಶ್ರೀಲಂಕಾದ ಜರ್ನಲಿಸ್ಟ್ ಡೇನಿಯಲ್ ಅಲೆಕ್ಸಾಂಡರ್ ಎಂಬುವರು ಭಾರತ ತಂಡ ನ್ಯೂಜಿಲ್ಯಾಂಡ್ ವಿರುದ್ಧ ಮೊದಲ ಟೆಸ್ಟ್ ಸೋಲುತ್ತಿದ್ದಂತೆ ಕೊಹ್ಲಿ ಕಾಲೆಳೆಯಲು ಯತ್ನಿಸಿ ಭಾರತೀಯ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
'ವಿರಾಟ್ ಕೊಹ್ಲಿ ಸದ್ಯ ಕಿವೀಸ್ ಸರಣಿಯಲ್ಲಿ ಎಲ್ಲಾ ಮೂರು ಮಾದರಿ ಕ್ರಿಕೆಟ್ ಪಂದ್ಯಗಳಿಂದ 19, 2,9,15, 51,11, 38,11,45 ರನ್ಗಳಿಸಿದ್ದಾರೆ. ಒಟ್ಟಾರೆ 9 ಇನ್ನಿಂಗ್ಸ್ಗಳಲ್ಲಿ ಒಂದು ಅರ್ಧಶತಕದ ನೆರವಿನಿಂದ 201 ರನ್ ಗಳಿಸಿದ್ದಾರೆ' ಎಂದು ಬರೆದಿದ್ದಾರೆ.