ಲಾಹೋರ್:ಏಕದಿನ ಪಂದ್ಯದಲ್ಲಿ ಹೀನಾಯ ಸೋಲು ಕಂಡು ನಿರಾಸೆಗೊಳಗಾಗಿದ್ದ ಶ್ರೀಲಂಕಾ ಟಿ-20 ಕ್ರಿಕೆಟ್ನಲ್ಲಿ ಅದ್ಭುತ ಸಂಘಟಿತ ಪ್ರದರ್ಶನ ನೀಡಿದ್ದು, ಇದರ ಫಲವಾಗಿ ಮೊದಲ ಚುಟುಕು ಪಂದ್ಯದಲ್ಲಿ ತವರು ನೆಲದಲ್ಲಿ ಪಾಕಿಸ್ತಾನಕ್ಕೆ ಹೀನಾಯ ಸೋಲಿನ ರುಚಿ ತೋರಿಸಿದೆ.
ಶ್ರೀಲಂಕಾ ಪ್ಲೇಯರ್ ಬ್ಯಾಟಿಂಗ್ ಗಡಾಫಿ ಸ್ಟೇಡಿಯಂನಲ್ಲಿ ನಡೆದ ಮೊದಲ ಟಿ-20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಶ್ರೀಲಂಕಾ ತಂಡ ಅದ್ಭುತ ಆರಂಭ ಪಡೆದುಕೊಂಡಿತು. ಆರಂಭಿಕರಾಗಿ ಕಣಕ್ಕಿಳಿದ ಗುಣತಿಲಕ್ ಹಾಗೂ ಫರ್ನಾಂಡೋ ಮೊದಲ ವಿಕೆಟ್ನಷ್ಟಕ್ಕೆ 84ರನ್ ಕೂಡಿಸಿದ್ರು. 33ರನ್ ಸಂಪಾದಿಸಿ ಫರ್ನಾಂಡೋ ವಿಕೆಟ್ ಒಪ್ಪಿಸಿದ ಬಳಿಕ ಗುಣತಿಲಕ್ ಜೊತೆ ಸೇರಿ ರಾಜಪಕ್ಷೆ ಸಹ ಉತ್ತಮ ಪ್ರದರ್ಶನ ನೀಡಿದರು. ಇದೇ ವೇಳೆ ಗುಣತಿಲಕ್ 38 ಎಸೆತಗಳಲ್ಲಿ ಬರೋಬ್ಬರಿ 57ರನ್ಗಳಿಸಿದ್ರೆ, ರಾಜಪಕ್ಷೆ ಕೇವಲ 22 ಎಸೆತಗಳಲ್ಲಿ 32ರನ್ಗಳಿಸಿದರು. ನಂತರ ಬಂದ ಕ್ಯಾಪ್ಟನ್ ಧನುಷ್ ಶಂಕರ್ 17, ಜಯಸೂರ್ಯ 2, ಉದ್ದಾನ್ 5 ಹಾಗೂ ಹಸರಂಗ್ ಅಜೇಯ 7 ರನ್ಗಳಿಕೆ ಮಾಡಿದರು. ಕೊನೆಯದಾಗಿ ಲಂಕಾ ತಂಡ 5 ವಿಕೆಟ್ ನಷ್ಟಕ್ಕೆ 165 ರನ್ಗಳಿಸಿ ಎದುರಾಳಿ ತಂಡಕ್ಕೆ 166 ರನ್ಗಳ ಟಾರ್ಗೆಟ್ ನೀಡಿತು.
ಪಾಕ್ ಪರ ಮೊಹಮ್ಮದ್ ಹಸೀನ್ 3 ವಿಕೆಟ್ ಪಡೆದರೆ, ಖಾನ್ 1ವಿಕೆಟ್ ಪಡೆದರು.
ಶ್ರೀಲಂಕಾ ಅಭಿಮಾನಿಗಳ ಸಂಭ್ರಮ ಇದಾದ ಬಳಿಕ 166ರನ್ ಟಾರ್ಗೆಟ್ ಬೆನ್ನತ್ತಿದ್ದ ಪಾಕ್ಗೆ ಆರಂಭದಲ್ಲೇ ಉದ್ದಾನ್ ಬ್ರೇಕ್ ನೀಡಿದರು. 4 ರನ್ಗಳಿಸಿದ ಅಹ್ಮದ್ ಶೆಹಜಾದ್ ವಿಕೆಟ್ ಪಡೆದುಕೊಂಡರು. ಇದರ ಬೆನ್ನಲ್ಲೇ ಉಮರ್ ಅಕ್ಮಲ್ ಖಾತೆ ತೆರೆಯುವುದಕ್ಕೂ ಮುನ್ನವೇ ಪ್ರದೀಪ್ ಬಲೆಗೆ ಬಿದ್ದು ಪೆವಿಲಿಯನ್ ಸೇರಿದರು. ಇದಾದ ಬಳಿಕ ಬಾಬರ್ ಅಜಂ(13) ವಿಕೆಟ್ ಸಹ ಪಡೆದುಕೊಂಡರು. ಮಧ್ಯಮ ಕ್ರಮಾಂಕದಲ್ಲಿ ಕ್ಯಾಪ್ಟನ್ ಸರ್ಫರಾಜ್(24) ಅಹ್ಮದ್(25) ತಂಡಕ್ಕೆ ಆಸರೆಯಾದರೂ ತಂಡವನ್ನ ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಇದಾದ ಬಳಿಕ ಬದಂ ಆಸೀಫ್ ಅಲಿ 6ರನ್, ಇಮಾದ್ ವಾಸೀಂ 7ರನ್, ಅಶ್ರಫ್ 8ರನ್, ಶಬ್ದಾದ್ ಖಾನ್ 6ರನ್ ಹಾಗೂ ಅಮೀರ್ 1ರನ್ಗಳಿಕೆ ಮಾಡಿದರು. ಕೊನೆಯದಾಗಿ ತಂಡ 17.4 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಕೇವಲ 101ರನ್ಗಳಿಕೆ ಮಾಡುವ ಮೂಲಕ 64ರನ್ಗಳ ಹೀನಾಯ ಸೋಲು ಕಂಡಿತ್ತು.
ಇತ್ತ ಮಾರಕ ಬೌಲಿಂಗ್ ಪ್ರದರ್ಶನ ನೀಡಿದ ನುವಾನ್ ಪ್ರದೀಪ್, ಉದ್ಧಾನ್ ತಲಾ 3ವಿಕೆಟ್ ಪಡೆದು ಮಿಂಚಿದ್ರೆ, ಹಸರಂಗ್ 2ವಿಕೆಟ್ ಹಾಗೂ ರಂಜಿತ್ 1ವಿಕೆಟ್ ಪಡೆದುಕೊಂಡರು.
2ನೇ ಟಿ-20 ಪಂದ್ಯದಲ್ಲೇ ಪಾಕ್ ಬೌಲರ್ ಹ್ಯಾಟ್ರಿಕ್
19 ವರ್ಷದ ಮೊಹಮ್ಮದ್ ಹಸೈನ್‌ಗೆ ಹ್ಯಾಟ್ರಿಕ್ ವಿಕೆಟ್!
ಇನ್ನು ಪಾಕ್ ಪರ ಎರಡನೇ ಟಿ-20 ಪಂದ್ಯವನ್ನಾಡಿರುವ 19 ವರ್ಷದ ಮೊಹಮ್ಮದ್ ಹಸೈನ್ ಹ್ಯಾಟ್ರಿಕ್ ವಿಕೆಟ್ ಪಡೆದುಕೊಂಡು ಮಿಂಚಿದರು. 32ರನ್ಗಳಿಸಿದ್ದ ರಾಜಪಕ್ಷೆ,17ರನ್ಗಳಿಸಿದ್ದ ಶಂಕರ್ ಹಾಗೂ 2ರನ್ಗಳಿಸಿದ್ದ ಜಯಸೂರ್ಯ ವಿಕೆಟ್ ಪಡೆದುಕೊಂಡು ಈ ಸಾಧನೆ ಮಾಡಿದರು. ಸಣ್ಣ ವಯಸ್ಸಿನಲ್ಲಿ ಈ ದಾಖಲೆ ನಿರ್ಮಾಣ ಮಾಡಿರುವ ಮೊದಲ ಕ್ರಿಕೆಟಿಗ ಎಂಬ ಖ್ಯಾತಿಗೆ ಸಹ ಪಾತ್ರರಾದರು. 16ನೇ ಓವರ್ನ ಕೊನೆ ಎಸೆತದಲ್ಲಿ ರಾಜಪಕ್ಷೆ ಹಾಗೂ 19ನೇ ಓವರ್ನ ಮೊದಲೆರಡು ಎಸೆತಗಳಲ್ಲಿ ಉಳಿದ ವಿಕೆಟ್ ಪಡೆದುಕೊಂಡರು.