ಕೊಲಂಬೊ:ಕ್ರಿಕೆಟ್ ವಲಯದಲ್ಲಿ ಕೋಲಾಹಲ ಎಬ್ಬಿಸಿದ್ದ 2011ರ ವಿಶ್ವಕಪ್ ಫೈನಲ್ ಫಿಕ್ಸಿಂಗ್ ಪ್ರಕರಣವನ್ನು ಸಾಕ್ಷ್ಯಾದಾರಗಳ ಕೊರತೆಯಿಂದ ಶ್ರೀಲಂಕಾ ಪೊಲೀಸ್ ಮುಚ್ಚಿಯಾಕಿದೆ.
ಸಾಕ್ಷ್ಯಾದಾರಗಳ ಕೊರತೆ.. 2011ರ ವಿಶ್ವಕಪ್ ಫೈನಲ್ ಫಿಕ್ಸಿಂಗ್ ಪ್ರಕರಣವನ್ನು ಕೈಬಿಟ್ಟ ಲಂಕಾ ಪೊಲೀಸರು
ಶ್ರೀಲಂಕಾ ಮಾಜಿ ಕ್ರೀಡಾಸಚಿವಾ ಮಹಿಂದಾನಂದ ಅಲುತ್ಗಮಾಗೆ 2011ರ ವಿಶ್ವಕಪ್ ಫೈನಲ್ ಫಿಕ್ಸಿಂಗ್ಗೆ ಒಳಪಟ್ಟಿತ್ತು ಎಂದು ಆರೋಪಿಸಿದ್ದರು. ಈ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ್ದ ಶ್ರೀಲಂಕಾ ಸರ್ಕಾರ ಕ್ರಿಮಿನಲ್ ತನಿಖೆಗೆ ಆದೇಶ ನೀಡಿ ಒಂದು ವಿಶೇಷ ಪೊಲೀಸ್ ತಂಡ ರಚಿಸಿತ್ತು.

ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ಈ ವೇಳೆ ಮಾಜಿ ಆಯ್ಕೆ ಸಮಿತಿ ಮುಖ್ಯಸ್ಥ ಅರವಿಂದ ಡಿ ಸಿಲ್ವಾ, ಉಪುಲ್ ತರಂಗ ಹಾಗೂ ನಾಯಕ ಕುಮಾರ್ ಸಂಗಾಕ್ಕರ ಅವರನ್ನು ಹಲವಾರು ಗಂಟೆಗಳ ಕಾಲ ತನಿಖೆ ನಡೆಸಿತ್ತು. ವಿಚಾರಣೆಯಲ್ಲಿ ಪೊಲೀಸರು ಕೇಳಿದ ಪ್ರಶ್ನೆಗಳು ತೃಪ್ತಿದಾಯಕವಾಗಿದ್ದು, ಫಿಕ್ಸಿಂಗ್ ಆರೋಪಕ್ಕೆ ಯಾವುದೇ ಸಾಕ್ಷಿ ದೊರೆತಿಲ್ಲ. ಹಾಗಾಗಿ ಈ ಪ್ರಕರಣವನ್ನು ಮುಚ್ಚಿಯಾಕುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.