ಅಬುಧಾಬಿ: 13ನೇ ಆವೃತ್ತಿಯಲ್ಲಿ ಕರಾರುವಾಕ್ ಯಾರ್ಕರ್ಗಳಿಗೆ ಪ್ರಸಿದ್ಧರಾಗಿರುವ ಸನ್ರೈಸರ್ಸ್ ಹೈದರಾಬಾದ್ ತಂಡದ ಟಿ ನಟರಾಜನ್ ತಂದೆಯಾಗಿ ಬಡ್ತಿ ಪಡೆದುಕೊಂಡಿದ್ದಾರೆ. ಶನಿವಾರ ಅವರ ಪತ್ನಿ ಪವಿತ್ರ ಮೊದಲ ಮಗುವಿಗೆ ಜನ್ಮ ನೀಡಿದ್ದಾರೆ.
ಡಬಲ್ ದಮಾಕ: ಕ್ವಾಲಿಫೈಯರ್ ಜೊತೆಗೆ ತಂದೆಯಾದ ಖುಷಿಯಲ್ಲಿ ಯಾರ್ಕರ್ ಸ್ಪೆಷಲಿಸ್ಟ್ ನಟರಾಜನ್ - ಎಸ್ಆರ್ಹೆಚ್ ಯಾರ್ಕರ್ ಸ್ಪೆಷಲಿಸ್ಟ್ ನಟರಾಜನ್
ತಮಿಳುನಾಡಿನ ಪ್ರಥಮ ದರ್ಜೆ ಕ್ರಿಕೆಟಿಗನಾಗಿರುವ ನಟರಾಜನ್ ಶುಕ್ರವಾರ ನಡೆದ ಪಂದ್ಯದಲ್ಲಿ ಮಿಸ್ಟರ್ 360 ಖ್ಯಾತಿಯ ಎಬಿ ಡಿ ವಿಲಿಯರ್ಸ್ ಅವರನ್ನೇ ಬೌಲ್ಡ್ ಮಾಡುವ ಮೂಲಕ ಬೆರಗು ಮೂಡಿಸಿದ್ದರು. ಟೂರ್ನಿಯಲ್ಲಿ 15 ಪಂದ್ಯಗಳಿಂದ 16 ವಿಕೆಟ್ ಪಡೆದಿದ್ದಾರೆ.

ಆರ್ಸಿಬಿ ವಿರುದ್ಧ ಗೆಲುವು ಸಾಧಿಸುತ್ತಿದ್ದಂತೆ ನಾಯಕ ಡೇವಿಡ್ ವಾರ್ನರ್ ನಟರಾಜನ್ ಪತ್ನಿ ಪವಿತ್ರ ಇಂದು ಮಗುವಿಗೆ ಜನ್ಮ ನೀಡಿದ್ದಾರೆ. ಈ ಗೆಲುವನ್ನು ಆ ಮಗುವಿಗೆ ಅರ್ಪಿಸುವುದಾಗಿ ತಿಳಿಸಿದ್ದರು. ಈ ವಿಚಾರವನ್ನು ಸನ್ರೈಸರ್ಸ್ ಹೈದರಾಬಾದ್ ತನ್ನ ಟ್ವಿಟರ್ ಖಾತೆಯಲ್ಲೂ ಶೇರ್ ಮಾಡಿದೆ. ಆದರೆ ಮಗುವ ಗಂಡು ಆಥವಾ ಹೆಣ್ಣು ಎಂಬುದು ತಿಳಿದುಬಂದಿಲ್ಲ.