ದುಬೈ: ಸನ್ ರೈಸರ್ಸ್ ಹೈದರಾಬಾದ್ ತಂಡ ಇಂದಿನ ಪಂದ್ಯದಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿರುವ ರಾಜಸ್ಥಾನ ರಾಯಲ್ಸ್ ತಂಡ ಎದುರಿಸುತ್ತಿದ್ದು, ಟಾಸ್ ಗೆದ್ದ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದೆ.
ಕಳೆದ ಪಂದ್ಯದಲ್ಲಿ ಪಂಜಾಬ್ ವಿರುದ್ಧ 69 ರನ್ ಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸುವ ಮೂಲಕ ಗೆಲುವಿನ ಹಳಿಗೆ ಮರಳಿದ್ದು, ಇಂದಿನ ಪಂದ್ಯದಲ್ಲಿ ಗೆದ್ದು ಅಂಕಪಟ್ಟಿಯಲ್ಲಿ ಟಾಪ್ 4ನಲ್ಲಿ ಕಾಣಿಸಿಕೊಳ್ಳುವ ಆಶಯದಲ್ಲಿದೆ. ಇಂದಿನ ಪಂದ್ಯದಲ್ಲಿ ಅಬ್ದುಲ್ ಸಮದ್ ಬದಲಿಗೆ ವಿಜಯ್ ಶಂಕರ್ಗೆ ಅವಕಾಶ ನೀಡಿದೆ.
ಇತ್ತ ಮೊದಲೆರಡು ಪಂದ್ಯಗಳನ್ನು ಗೆದ್ದು, ನಂತರ ಸತತ 4 ಪಂದ್ಯಗಳನ್ನು ಸೋತಿರುವ ರಾಜಸ್ಥಾನ್ ತಂಡ ಇಂದಿನ ಪಂದ್ಯದಲ್ಲಿ 4 ಬದಲಾವಣೆ ಮಾಡಿಕೊಂಡಿದೆ. ಯುವ ಬ್ಯಾಟ್ಸ್ಮನ್ ಯಶಸ್ವಿ ಜೈಸ್ವಾಲ್ ಜಾಗಕ್ಕೆ ರಾಬಿನ್ ಉತ್ತಪ್ಪರನ್ನು, ಲಾಮ್ರೋರ್ ಜಾಗಕ್ಕೆ ರಿಯಾನ್ ಪರಾಗ್, ವರುಣ್ ಆ್ಯರೋನ್ ಜಾಗಕ್ಕೆ ಜಯದೇವ್ ಉನಾದ್ಕಟ್ಗೂ ಹಾಗೂ ಆ್ಯಂಡ್ರ್ಯೂ ಜಾಗಕ್ಕೆ ಬೆನ್ಸ್ಟೋಕ್ಸ್ರನ್ನು ಆಯ್ಕೆ ಮಾಡಿದೆ.