ಅಬುಧಾಬಿ: ಕೆಕೆಆರ್ ವಿರುದ್ಧ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ ಸನ್ರೈಸರ್ಸ್ ಹೈದರಾಬಾದ್ ತಂಡ ಮಾರ್ಗನ್ ಬಳಗವನ್ನು 163 ರನ್ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದೆ.
ಟಾಸ್ ಸೋತು ಬ್ಯಾಟಿಂಗ್ ಇಳಿದ ಕೆಕೆಆರ್ ತಂಡ ಪವರ್ ಪ್ಲೇನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿ ಮೊದಲ ವಿಕೆಟ್ಗೆ 48 ರನ್ಗಳ ಜೊತೆಯಾಟ ನೀಡಿತು. ಈ ವೇಳೆ ಬೌಲಿಂಗ್ ದಾಳಿಗಿಳಿದ ನಟರಾಜನ್16 ಎಸೆತಗಳಲ್ಲಿ 23 ರನ್ಗಳಿಸಿದ್ದ ತ್ರಿಫಾಠಿಯನ್ನು ಬೌಲ್ಡ್ ಮಾಡಿ ಹೈದರಾಬಾದ್ಗೆ ಮೊದಲ ಬ್ರೇಕ್ ತಂದುಕೊಟ್ಟರು.
ಇತ್ತ ಗಿಲ್ ರನ್ಗಳಿಸಲು ಪರದಾಡಿ ಕೊನೆಗೆ 37 ಎಸೆತಗಳಲ್ಲಿ 5 ಬೌಂಡರಿ ಸಹಿತ 36 ರನ್ಗಳಿಸಿ ಔಟಾದರು. ನಂತರದ ಓವರ್ನಲ್ಲೇ 29 ರನ್ಗಳಿಸಿ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ರಾಣಾ ವಿಜಯ್ ಶಂಕರ್ಗೆ ವಿಕೆಟ್ ಒಪ್ಪಿಸಿದರು.