ನವದೆಹಲಿ: ಭಾರತ ತಂಡದ ಸ್ಟಾರ್ ಟೆನ್ನಿಸ್ ಪ್ಲೇಯರ್ ಕನ್ನಡಿಗ ರೋಹನ್ ಬೋಪಣ್ಣ ಹಾಗೂ ಮಹಿಳಾ ಕ್ರಿಕೆಟರ್ ಸ್ಮೃತಿ ಮಂಧಾನ ಕ್ರೀಡಾ ಸಚಿವಾ ಕಿರಣ್ ರಿಜಿಜು ಅವರಿಂದ ಅರ್ಜುನ ಪ್ರಶಸ್ತಿ ಸ್ವೀಕರಿಸಿದ್ದಾರೆ.
ಕ್ರೀಡಾ ಸಚಿವರಿಂದ ಅರ್ಜುನ ಪ್ರಶಸ್ತಿ ಸ್ವೀಕರಿಸಿದ ರೋಹನ್ ಬೋಪಣ್ಣ, ಸ್ಮೃತಿ ಮಂಧಾನ
ಮಹಿಳಾ ಕ್ರಿಕೆಟರ್ ಸ್ಮೃತಿ ಮಂಧಾನ ಹಾಗೂ ಟೆನ್ನಿಸ್ ಪ್ಲೇಯರ್ ರೋಹನ್ ಬೋಪಣ್ಣ ಕ್ರೀಡಾ ಸಚಿವಾ ಕಿರಣ್ ರಿಜಿಜು ಅವರಿಂದ ಅರ್ಜುನ ಪ್ರಶಸ್ತಿ ಸ್ವೀಕರಿಸಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ರಾಷ್ಟ್ರಪತಿ ಭವನದಲ್ಲಿ ನಡೆದಿದ್ದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಹಲವು ಕ್ರೀಡಾಪಟುಗಳಿಗೆ ಕ್ರೀಡಾ ಪ್ರಶಸ್ತಿ ವಿತರಿಸಲಾಗಿತ್ತು. ಆ ವೇಳೆ ಮಂಧಾನ ಹಾಗೂ ಬೋಪಣ್ಣ ಅಂತಾರಾಷ್ಟ್ರೀಯ ಟೂರ್ನಮೆಂಟ್ಗಳಲ್ಲಿ ಭಾಗವಹಿಸಿದ್ದರಿಂದ ಪ್ರಶಸ್ತಿ ಸ್ವೀಕರಿಸಿರಲಿಲ್ಲ.
ಕರ್ನಾಟಕದವರಾದ ಬೋಪಣ್ಣ 2018ರ ಕಾಮನ್ವೆಲ್ತ್ನ ಪುರುಷರ ಡಬಲ್ಸ್ ವಿಭಾಗದಲ್ಲಿ ಚಿನ್ನ ಗೆದ್ದಿದ್ದರು. ಇದರಿಂದ ಅವರಿಗೆ ಅರ್ಜುನ ಅವಾರ್ಡ್ ಒಲಿದು ಬಂದಿತ್ತು. ಇನ್ನು ಮಂಧಾನ 2018ರ ಐಸಿಸಿಯ ಮಹಿಳಾ ಕ್ರಿಕೆಟರ್ ಎಂಬ ಗೌರವ ಸಂದಿದೆ. ಇವರು 2018ರಲ್ಲಿ ಏಕದಿನ ಕ್ರಿಕೆಟ್ನಲ್ಲಿ 12 ಪಂದ್ಯಗಳಿಂದ 669 ರನ್ ಹಾಗೂ 25 ಟಿ20 ಪಂದ್ಯಗಳಲ್ಲಿ 622 ರನ್ ಗಳಿಸಿದ್ದರು. ಇದೀಗ ಇವರಿಬ್ಬರು ಕ್ರೀಡಾ ಸಚಿವರಿಂದ ಅವಾರ್ಡ್ ಸ್ವೀಕರಿಸಿ ಸಂತಸ ವ್ಯಕ್ತಪಡಿಸಿದ್ದು ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಪ್ರದರ್ಶನ ನೀಡುವ ಭರವಸೆ ನೀಡಿದ್ದಾರೆ.