ಮುಂಬೈ: ಬಾಲಿವುಡ್ ಹಿರಿಯ ನಟ ರಿಷಿ ಕಪೂರ್ ಅನಾರೋಗ್ಯದಿಂದ ಗುರುವಾರ ಮೃತಪಟ್ಟಿದ್ದು, ಇದಕ್ಕೆ ಭಾರತ ಕ್ರೀಡಾಲೋಕ ಕಂಬನಿ ಮಿಡಿದಿದೆ.
67 ವಯಸ್ಸಿನ ರಿಷಿ ಕಪೂರ್ ಬುಧವಾರ ತೀವ್ರ ಅನಾರೋಗ್ಯದಿಂದ ಆಸ್ಪತ್ರೆಗೆ ಸೇರಿದ್ದರು. ಗುರುವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗೇ ಇಹಲೋಕ ತ್ಯಜಿಸಿದ್ದರು. ನಿನ್ನೆಯಷ್ಟೇ ಹಿರಿಯ ನಟ ಇರ್ಫಾನ್ ಖಾನ್ ಅವರನ್ನು ಕಳೆದುಕೊಂಡು ನೋವಿನಲ್ಲಿದ್ದ ಭಾರತೀಯರಿಗೆ ಇಂದು ರಿಷಿ ಕಪೂರ್ ಸಾವು ಮತ್ತೊಂದು ಆಘಾತ ತಂದಿದೆ. ಕ್ರಿಕೆಟಿಗರೂ ಕೂಡ ಈ ಇಬ್ಬರು ಬಾಲಿವುಡ್ ಲೆಜೆಂಡ್ಗಳ ಸಾವಿಗೆ ಸಂತಾಪ ಸೂಚಿಸಿದ್ದಾರೆ.
ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ‘ಇದು ಅಸತ್ಯ ಮತ್ತು ನಂಬಲಸಾಧ್ಯವಾಗಿದೆ. ನಿನ್ನೆ ಇರ್ಫಾನ್ ಖಾನ್, ಇಂದು ರಿಷಿ ಕಪೂರ್. ಇಂದು ಈ ಇಬ್ಬರು ಲೆಜೆಂಡ್ಗಳನ್ನು ನಮ್ಮನ್ನಗಲಿದ್ದಾರೆ ಎಂಬುದನ್ನು ಸ್ವೀಕರಿಸಲು ತುಂಬಾ ಕಷ್ಟವಾಗುತ್ತಿದೆ. ಅವರ ಕುಟಂಬಕ್ಕೆ ಸಂತಾಪ ಹಾಗೂ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ.