ನಾಟಿಂಗ್ ಹ್ಯಾಮ್ (ಇಂಗ್ಲೆಂಡ್) :ವೆಸ್ಟ್ ಇಂಡೀಸ್ ಹಾಗು ಪಾಕಿಸ್ತಾನ ಪಂದ್ಯದ ವೇಳೆ ಪಾಕ್ ಆಟಗಾರ ಫಕಾರ್ ಜಮಾನ್ ಅವರನ್ನು ತನ್ನದೇ ದೇಶದ ಅಭಿಮಾನಿಯೊಬ್ಬರು ಕಾಲೆಳೆದಿರುವ ಪ್ರಸಂಗ ನಡೆದಿದೆ.
ಫಕಾರ್ ಬಾಯ್, 20 ರೂಪಾಯಿ ಪಕೋಡಾ ತನ್ನಿ! ಆಟಗಾರನ ಕಾಲೆಳೆದ ಸ್ವದೇಶಿ ಅಭಿಮಾನಿ! - ವಿಶ್ವಕಪ್ 2019
ಪಾಕಿಸ್ತಾನ ಮತ್ತು ವೆಸ್ಟ್ಇಂಡೀಸ್ ನಡುವಿನ ಪಂದ್ಯದ ಸಮಯದಲ್ಲಿ ಪಾಕಿಸ್ತಾನದ ಆಟಗಾರ ಫಕಾರ್ ಜಮಾನ್ಗೆ ಅಭಿಮಾನಿಯೊಬ್ಬ, ಬಾಯ್, 20 ರುಪಾಯಿ ಪಕೋಡ ತನ್ನಿ ಎಂದು ಕಿಚಾಯಿಸಿರುವ ಘಟನೆ ನಡೆದಿದೆ. ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಪಾಕ್ ಕಳಪೆ ಪ್ರದರ್ಶನ ಆ ದೇಶದ ಅಭಿಮಾನಿಗಳನ್ನು ನಿರಾಸೆಗೊಳಿಸಿತ್ತು.
ವೆಸ್ಟ್ ಇಂಡೀಸ್ ಬ್ಯಾಟಿಂಗ್ ಮಾಡುತ್ತಿದ್ದು ಪಾಕಿಸ್ತಾನ ಫೀಲ್ಡಿಂಗ್ ಮಾಡುವ ಸಮಯದಲ್ಲಿ ಪಾಕ್ ಅಭಿಮಾನಿಯೊಬ್ಬ ತನ್ನದೇ ದೇಶದ ಆಟಗಾರನಾದ ಫಕಾರ್ ಜಮಾನ್ಗೆ ಸರಿಯಾಗಿ ಕಾಲೆಳೆದಿದ್ದು, 'ಫಕಾರ್ ಬಾಯ್ 20 ರುಪಾಯಿ ಪಕೋಡ ತನ್ನಿ' ಎಂದು ಛೇಡಿಸಿದ್ದಾನೆ.
ಪಾಕಿಸ್ತಾನದ ಕಳಪೆ ಪ್ರದರ್ಶನವನ್ನು ನೋಡಿ ಬೇಸರಗೊಂಡ ಅಭಿಮಾನಿ ಈ ರೀತಿ ವ್ಯಂಗ್ಯವಾಡಿದ್ದಾನೆ. ಬೌಂಡರಿ ಸಮೀಪದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಫಕರ್ ಅವರನ್ನು ಅಣಕಿಸುವಂತೆ 20 ರುಪಾಯಿ ಪಕೋಡ ತನ್ನಿ ಎಂದಿದ್ದಾನೆ. ಇದನ್ನು ಕೇಳಿಸಿಕೊಂಡ ಆಟಗಾರಅಭಿಮಾನಿಗಳ ಕಡೆ ತಿರುಗಿ ಕಿರುನಗೆ ಬೀರಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.