ವೋರ್ಸೆಸ್ಟರ್ :ಸ್ಪಿನ್ನರ್‌ಗಳು ಹೆಚ್ಚಾಗಿ ಚೆಂಡಿನ ಮೇಲೆ ಹಿಡಿತ ಸಾಧಿಸಲು ಎಂಜಲು ಸವರುತ್ತಾರೆ. ಇದೀಗ ಐಸಿಸಿ ನಿಯಮಗಳು ಮತ್ತು ನಿಬಂಧನೆಗಳಿಗೆ ಬದಲಾಗಿ ಅವರಿಗೆ ಹೊಸ ವಿಧಾನಗಳನ್ನು ಕಲಿಸಲಾಗುತ್ತಿದೆ ಎಂದು ಪಾಕ್ ಬೌಲಿಂಗ್ ಕೋಚ್ ಮುಷ್ತಾಕ್ ಅಹ್ಮದ್ ತಿಳಿಸಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ತಂಡವು ಬಹು ನಿರೀಕ್ಷಿತ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಈ ಸಂದರ್ಭದಲ್ಲಿ ಆಡಲಿದೆ ಮತ್ತು ಅಗಸ್ಟ್‌ನಿಂದ ಅನೇಕ ಟಿ-20 ಪಂದ್ಯಗಳನ್ನು ಆಡಲಿದೆ. 14 ದಿನಗಳ ಕ್ವಾರಂಟೈನ್ ಮುಗಿಸಿರುವ ಪಾಕ್ ತಂಡ ಜುಲೈ 13ರಂದು ಡರ್ಬಿಶೈರ್ಗೆ ಪ್ರಯಾಣಿಸಲಿದೆ. ಜುಲೈ 5-6 ರಂದು ಎರಡು ದಿನಗಳ ಅಂತರ-ತಂಡಗಳ ವಿರುದ್ಧ ಅಭ್ಯಾಸ ಪಂದ್ಯಗಳನ್ನು ಆರಂಭಿಸಿದ್ದರು.
ಕೋವಿಡ್-19 ಸಂಬಂಧಿತ ಸವಾಲುಗಳ ಹೊರತಾಗಿಯೂ, ಆಟಗಾರರು ಈವರೆಗೆ ಫಿಟ್ ಆಗಿದ್ದಾರೆ ಎಂದು ಮುಷ್ತಾಕ್ pcb.com.pkಗೆ ತಿಳಿಸಿದ್ದಾರೆ. ಚೆಂಡಿಗೆ ಎಂಜಲು ಸವರುವುದನ್ನು ನಿಷೇಧಿಸಿರುವುದರಿಂದ ಬಾಲ್ ಹೊಳೆಯುವುದಕ್ಕೆ ಆಟಗಾರರು ಹೊಸ ನಿಯಮಗಳನ್ನು ರೂಪಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಪಾಕ್ ಸ್ಪಿನ್ ಬೌಲಿಂಗ್ ತರಬೇತುದಾರ ಮುಷ್ತಾಕ್ ಅಹ್ಮದ್ ಆಟಗಾರರು ಮತ್ತು ಸಿಬ್ಬಂದಿ ತಂಡದ ಗುರಿ ಮತ್ತು ಉದ್ದೇಶಗಳ ಮೇಲೆ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದು ನನಗೆ ನಿಜಕ್ಕೂ ಸಂತೋಷವನ್ನುಂಟು ಮಾಡುತ್ತಿದೆ ಮತ್ತು ಆಟಗಾರರು ಹೊಸ ಸವಾಲುಗಳಿಗೆ ಸಿದ್ಧರಾಗುತ್ತಾರೆ ಎಂದು ನಾವು ಭಾವಿಸಿದ್ದೇವೆ ಎಂದು ತಿಳಿಸಿದ್ದಾರೆ.
ಸ್ಪಿನ್ನರ್‌ಗಳು ಹೆಚ್ಚಾಗಿ ಚೆಂಡಿನ ಮೇಲೆ ಹಿಡಿತ ಸಾಧಿಸಲು ಎಂಜಲು ಸವರುತ್ತಾರೆ. ಇದೀಗ ಐಸಿಸಿ ನಿಯಮಗಳು ಮತ್ತು ನಿಬಂಧನೆಗಳಿಗೆ ಬದಲಾಗಿ ಅವರಿಗೆ ಹೊಸ ವಿಧಾನಗಳನ್ನು ಕಲಿಸಲಾಗುತ್ತಿದೆ ಎಂದರು.