ಮುಂಬೈ: ಟೀಮ್ ಇಂಡಿಯಾದ ಸ್ಫೋಟಕ ದಾಂಡಿಗ ರೋಹಿತ್ ಶರ್ಮಾ ಸ್ಪೇನ್ನಲ್ಲಿ ನಡೆಯುವ ಪ್ರತಿಷ್ಠಿತ ಲಾ ಲಿಗಾ ಫುಟ್ಬಾಲ್ ಲೀಗ್ಗೆ ಭಾರತದಲ್ಲಿ ರಾಯಭಾರಿಯಾಗಿ ನೇಮಕವಾಗುವ ಮೂಲಕ ಕ್ರಿಕೆಟ್ ಮಾತ್ರವಲ್ಲ ಫುಟ್ಬಾಲ್ ಲೋಕದಲ್ಲೂ ಹೊಸ ಹೆಜ್ಜೆಯನ್ನಿಟ್ಟಿದ್ದಾರೆ.
ಸ್ಪೇನಿನ ಲಾ ಲಿಗಾ ಫುಟ್ಬಾಲ್ ಲೀಗ್ಗೆ ರೋಹಿತ್ ಶರ್ಮಾ ಬ್ರ್ಯಾಂಡ್ ಅಂಬಾಸಿಡರ್ - ರೋಹಿತ್ ಶರ್ಮಾ ಲಾ ಲೀಗಾ
ನಿನ್ನೆಯಷ್ಟೇ ತನ್ನ ಅದ್ಭುತ ಬ್ಯಾಟಿಂಗ್ ನೆರವಿನಿಂದ ಭಾರತಕ್ಕೆ ಟಿ20 ಸರಣಿ ಗೆದ್ದುಕೊಡುವಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ್ದ ರೋಹಿತ್ ಶರ್ಮಾ ಇಂದು ಪ್ರತಿಷ್ಠಿತ ಫುಟ್‌ಬಾಲ್ ಲೀಗ್‌ನ ರಾಯಭಾರಿಯಾಗಿ ನೇಮಕಗೊಳ್ಳುವ ಮೂಲಕ ವಿಶ್ವದಲ್ಲೇ ಈ ಶ್ರೇಯಕ್ಕೆ ಪಾತ್ರನಾದ ಮೊದಲ ಕ್ರಿಕೆಟಿಗ ಹಾಗೂ ಫುಟ್ಬಾಲೇತರ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
![ಸ್ಪೇನಿನ ಲಾ ಲಿಗಾ ಫುಟ್ಬಾಲ್ ಲೀಗ್ಗೆ ರೋಹಿತ್ ಶರ್ಮಾ ಬ್ರ್ಯಾಂಡ್ ಅಂಬಾಸಿಡರ್ Spanish football league La Liga](https://etvbharatimages.akamaized.net/etvbharat/prod-images/768-512-5353741-580-5353741-1576157708332.jpg)
ಲಾ ಲಿಗಾ ಜೊತೆ ಒಪ್ಪಂದ ಮಾಡಿಕೊಂಡಿರುವುದು ನನಗೆ ಅತೀವ ಖುಷಿ ನೀಡಿದೆ. ಲಾಲಿಗಾದಂತಹ ಸುಂದರ ಲೀಗ್ನಲ್ಲಿ ಹೊಸ ಪಯಣ ಆರಂಭಿಸಿದ್ದೇನೆ. ಭಾರತದಲ್ಲಿ ಫುಟ್ಬಾಲ್ಗೆ ಅಭಿಮಾನಿಗಳನ್ನು ಸೇರಿಸುವುದರತ್ತ ನನ್ನ ಗಮನ ಕೇಂದ್ರಿಕರಿಸಿದ್ದೇನೆ ಎಂದು ರೋಹಿತ್ ತಿಳಿಸಿದ್ದಾರೆ. ಫುಟ್ಬಾಲ್ ಭಾರತದಲ್ಲಿ ಇತ್ತೀಚೆಗೆ ಬೆಳೆಯುತ್ತಿರುವ ಕ್ರೀಡೆ. ದೇಶದಲ್ಲಿ ಕಳೆದ ಐದು ವರ್ಷಗಳಲ್ಲಿ ಫುಟ್‌ಬಾಲ್ ಬೆಳವಣಿಗೆ ಗಮನಾರ್ಹವಾಗಿದೆ. ಇದಕ್ಕೆ ಅಭಿಮಾನಿಗಳು ಸೇರಿದಂತೆ ಅದರೊಂದಿಗೆ ಸಂಬಂಧ ಹೊಂದಿರುವ ಎಲ್ಲರಿಗೂ ಈ ಕ್ರೆಡಿಟ್ ಸಲ್ಲುತ್ತದೆ ಎಂದು ರೋಹಿತ್ ಸಂತಸ ವ್ಯಕ್ತಪಡಿಸಿದ್ರು.
ಇನ್ನು ರೋಹಿತ್ ಶರ್ಮಾ ಭಾರತದ ಮಂಚೂಣಿ ಕ್ರಿಕೆಟಿಗ ಅಲ್ಲದ ಅವರು ಫುಟ್ಬಾಲ್ ಹಾಗೂ ಲಾ ಲೀಗಾದ ಅಭಿಮಾನಿಯಾಗಿರುವುದರಿಂದ ಭಾರತದಲ್ಲಿ ಲಾ ಲೀಗಾಗೆ ಹೆಚ್ಚಿನ ಮನ್ನಣೆ ಸಿಗಲಿದೆ ಎಂದು ಭಾವಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.