ಜೋಹಾನ್ಸ್ಬರ್ಗ್:ಪ್ರಪಂಚದಾದ್ಯಂತ ಅಬ್ಬರಿಸುತ್ತಿರುವ ಕೋವಿಡ್-19 ಸೋಂಕಿನಿಂದ ಇಡೀ ವಿಶ್ವವೇ ತತ್ತರಿಸಿ ಹೋಗಿದ್ದು, ಎಲ್ಲ ದೇಶಗಳಲ್ಲೂ ಇದರ ಅಬ್ಬರ ಜೋರಾಗಿದೆ.
ಇದೀಗ ದಕ್ಷಿಣ ಆಫ್ರಿಕಾದ ಮತ್ತೋರ್ವ ಕ್ರಿಕೆಟಿಗನಿಗೆ ಈ ಮಹಾಮಾರಿ ಕೊರೊನಾ ಹಬ್ಬಿದೆ. ಆಫ್ರಿಕಾದ ಆಲ್ರೌಂಡರ್ ಆಟಗಾರನಾಗಿದ್ದ ಸೊಲೊ ನಿಕೋಲಾಸ್ಗೆ ಮಹಾಮಾರಿ ತಗುಲಿರುವುದು ಕನ್ಫರ್ಮ್ ಆಗಿದೆ. ಈಗಾಗಲೇ ಪಾಕಿಸ್ತಾನದ ಜಫರ್ ಸರ್ಫರಾಜ್ ಹಾಗೂ ಸ್ಕಾಟ್ಲ್ಯಾಂಡ್ನ ಮಜೀದ್ ಹಕ್ಗೆ ಈ ವೈರಸ್ ತಗುಲಿದೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ನಿಕೋಲಾಸ್ ಕಳೆದ ವರ್ಷ ಜಿಬಿಎಸ್ ವೈರಸ್ನಿಂದ ಬಳಲುತ್ತಿರುವ ನಾನು ಕಳೆದ 10 ತಿಂಗಳಿಂದಲೂ ಟಿಬಿ, ಕಿಡ್ನಿ ವೈಫಲ್ಯದ ತೊಂದರೆಗೆ ಒಳಗಾಗಿದ್ದೇನೆ. ಆದರೆ ಇದೀಗ ಕೊರೊನಾ ವೈರಸ್ಗೆ ಒಳಗಾಗಿದ್ದು, ಈ ಎಲ್ಲ ವೈರಸ್ ನನಗೇ ಬರುತ್ತಿರುವುದು ಯಾಕೆ ಎಂಬುದು ಗೊತ್ತಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಆಫ್ರಿಕಾ ಪರ ನಿಕೋಲಾಸ್ 36 ಪ್ರಥಮ ದರ್ಜೆ ಕ್ರಿಕೆಟ್ ಆಡಿದ್ದು, 2012ರಿಂದಲೂ ಈಸ್ಟರ್ನ್ ಪ್ರೊವಿನ್ಸ್ ಪರ ಕ್ರಿಕೆಟ್ ಆಡ್ತಿದ್ದರು. ಅಂಡರ್-19 ತಂಡದಲ್ಲಿದ್ದಾಗ ದಕ್ಷಿಣ ಆಫ್ರಿಕಾ ಪರ 8 ಪಂದ್ಯಗಳನ್ನಾಡಿದ್ದು, 2012 ವಿಶ್ವಕಪ್ ವೇಳೆ ದಕ್ಷಿಣ ಆಫ್ರಿಕಾ ಅಂಡರ್-19 ತಂಡದಲ್ಲಿದ್ದರು. ಪ್ರಾಂಚೈಸಿ ಕ್ರಿಕೆಟ್ನಲ್ಲೂ ಇವರು ಭಾಗಿಯಾಗಿದ್ದಾರೆ.