ರಿಷಿಕೇಶ(ಉತ್ತರಾ ಖಂಡ್): ಭಾರತ ಹಾಗೂ ಭಾರತದ ಸಂಸ್ಕೃತಿ ಮೇಲೆ ಅಪಾರ ಗೌರವ ಇಟ್ಟುಕೊಂಡಿರುವ ದಕ್ಷಿಣ ಆಫ್ರಿಕಾದ ಮಾಜಿ ಆಲ್ರೌಂಡರ್ ಜಾಂಟಿ ರೋಡ್ಸ್ ಗಂಗೆಯಲ್ಲಿ ಸ್ನಾನ ಮಾಡಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
ಆಧ್ಯಾತ್ಮಿಕ-ದೈಹಿಕ ಶಕ್ತಿ ವೃದ್ಧಿಗೆ ಪವಿತ್ರ ಗಂಗೆಯಲ್ಲಿ ಸ್ನಾನ ಮಾಡಿ: ಜಾಂಟಿ ರೋಡ್ಸ್ - ಜಾಂಟಿ ರೋಡ್ಸ್
ಮಾರ್ಚ್ 29 ರಿಂದ ನಡೆಯುವ ಐಪಿಎಲ್ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಹಾಯಕ ಕೋಚ್ ಆಗಿ ಜಾಂಟಿ ರೋಡ್ಸ್ ಕಾರ್ಯ ನಿರ್ವಹಿಸಲಿದ್ದಾರೆ. ಈ ಹಿಂದೆ ಸತತ 8 ವರ್ಷಗಳ ಕಾಲ ಮುಂಬೈ ಇಂಡಿಯನ್ಸ್ ತಂಡದ ಕೋಚ್ ಆಗಿ ಇವರು ಕಾರ್ಯನಿರ್ವಹಿಸಿದ್ದರು.
ಜಾಂಟಿ ರೋಡ್ಸ್
ಭಾರತವನ್ನು ಪ್ರೀತಿಸುವ ಜಾಂಟಿ ರೋಡ್ಸ್ ತಮ್ಮ ಮಗಳಿಗೆ ಇಂಡಿಯಾ ಎಂದೇ ನಾಮಕರಣ ಮಾಡಿ ಭಾರತೀಯರ ಮನಗೆದ್ದಿದ್ದರು. ಇದೀಗ ರಿಷಿಕೇಶದಲ್ಲಿ ಭಾರತೀಯರು ಆರಾಧಿಸುವ ಗಂಗಾನದಿಯಲ್ಲಿ ಸ್ನಾನ ಮಾಡಿ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ.
ಮುಂಬೈನಲ್ಲಿ ನಡೆಯಲಿರುವ ರೋಡ್ ಸೇಫ್ಟಿ ಟೂರ್ನಿಯಲ್ಲಿ ರೋಡ್ಸ್ ದಕ್ಷಿಣ ಅಫ್ರಿಕಾ ಲೆಜೆಂಡ್ಸ್ ತಂಡದ ಪರ ಆಡಲಿದ್ದಾರೆ. ವಿಶ್ವದ ಶ್ರೇಷ್ಠ ಫೀಲ್ಡರ್ ಆಗಿದ್ದ ಜಾಂಟಿ ರೋಡ್ಸ್ ದಕ್ಷಿಣ ಪರ 52 ಟೆಸ್ಟ್, 245 ಏಕದಿನ ಪಂದ್ಯಗಳನ್ನಾಡಿದ್ದಾರೆ. ಟೆಸ್ಟ್ನಲ್ಲಿ 2,532 ಹಾಗೂ 5,935 ರನ್ಗಳಿಸಿದ್ದಾರೆ.