ಹೈದರಾಬಾದ್:ದಕ್ಷಿಣ ಆಫ್ರಿಕಾದ ಮಹಿಳಾ ಕ್ರಿಕೆಟ್ ತಂಡದ ಮಾಜಿ ಆಟಗಾರ್ತಿ ಎಲ್ರಿಸಾ ಥ್ಯಿನಿಸೆನ್ ಫೌರಿ ಭೀಕರ ರಸ್ತ ಅಪಘಾತದಲ್ಲಿ ಅಸುನೀಗಿದ್ದಾರೆ.
ಫೌರಿ ಹಾಗೂ ಆಕೆಯ ಮಗು ಸ್ಟಿಲ್ಫೌಂಟೇನ್ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಫೌರಿ ಸಾವಿಗೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ತಬಾಂಗ್ ಮೋರೆ ಕಂಬನಿ ಮಿಡಿದಿದ್ದಾರೆ. ಈ ಸುದ್ದಿ ನಿಜಕ್ಕೂ ಆಘಾತಕಾರಿ.ಕ್ರಿಕೆಟ್ ಲೋಕದ ದುರಂತ ಎಂದು ಮೋರೆ ಬಣ್ಣಿಸಿದ್ದಾರೆ.
25 ವರ್ಷದ ಎಲ್ರಿಸಾ ಥ್ಯಿನಿಸೆನ್ ಫೌರಿ ದಕ್ಷಿಣ ಆಫ್ರಿಕಾ ಮಹಿಳಾ ಕ್ರಿಕೆಟ್ ತಂಡದ ಪರವಾಗಿ ಮೂರು ಏಕದಿನ ಹಾಗೂ ಏಕೈಕ ಟಿ-20 ಪಂದ್ಯವನ್ನಾಡಿದ್ದರು. ಫೌರಿ 2013 ವಿಶ್ವಕಪ್ ತಂಡವನ್ನು ಪ್ರತಿನಿಧಿಸಿದ್ದರು. ಆಲ್ರೌಂಡರ್ ಆಗಿ ಫೌರಿ ಗುರುತಿಸಿಕೊಂಡಿದ್ದಳು.
ಫೌರಿ ರಾಷ್ಟ್ರೀಯ ತಂಡಕ್ಕೆ ಹಾಗೂ ದೇಶೀಯ ಕ್ರಿಕೆಟ್ಗಾಗಿ ಸಾಕಷ್ಟು ದುಡಿದಿದ್ದಾರೆ. ಆಕೆಯ ಸೇವೆ ಅನನ್ಯ. ಕ್ರಿಕೆಟ್ ಮಂಡಳಿಯ ಪರವಾಗಿ ಆಕೆ ಕುಟುಂಬಸ್ಥರಿಗೆ ಹಾಗೂ ಕ್ರಿಕೆಟ್ ಲೋಕಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ಆ ದೇವರು ನೀಡಲಿ ಎಂದು ತಬಾಂಗ್ ಮೋರೆ ಸಂತಾಪ ಸೂಚಿಸಿದ್ದಾರೆ.